ಹಿಂದೂಗಳ ಹಿತಕ್ಕಾಗಿ ಹಿಂದೂರಾಷ್ಟ್ರ ಸ್ಥಾಪನೆಯೇ ಪರ್ಯಾಯ
ಬೆಂಗಳೂರು : ದಿನೇದಿನೇ ಹಿಂದೂಗಳ ಬಗೆಗಿನ ಸರ್ಕಾರದ ತಾತ್ಸಾರ ಹೆಚ್ಚುತ್ತಿದೆ, ಸರಕಾರವು ಅನ್ಯ ಮತೀಯರ ಓಲೈಕೆಯ ಹೊಸಹೊಸ ಮಾರ್ಗಗಳನ್ನು ಅವಲಂಬಿಸುತ್ತದೆ ಆದರೆ ಹಿಂದೂ ಹಿತವನ್ನು ಕಾಲ್ಕೆಳಗೆ ಹಾಕಿ ತುಳಿಯುತ್ತಿದೆ. ಪ್ರಸ್ತುತ ಭಾರತದಲ್ಲಿರುವ ಹಿಂದೂಗಳ ಸ್ಥಿತಿಯು ಇನ್ನು ಪಾಕಿಸ್ಥಾನದಲ್ಲಿರುವ ಹಿಂದೂಗಳ ಸ್ಥಿತಿಯಂತಾಗಲು ಇನ್ನೂ ಬಹಳ ಸಮಯ ತಗುಲಲಾರದು. ಆದುದರಿಂದ ಹಿಂದೂಗಳು ಮತ್ತು ಹಿಂದೂ ಸಂಘಟನೆಗಳು ಸಂಘಟಿತರಾಗಿ ಹಿಂದೂಗಳ ಮೇಲಿನ ಆಕ್ರಮಣಗಳ ವಿರುದ್ಧ ಕಾನೂನು ಬದ್ಧವಾಗಿ ಹೋರಾಡುವುದು ಈಗ ಅತ್ಯಂತ ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ಮಾರ್ಗಕ್ರಮಣ ಮಾಡಲು ಮಾರ್ಗಶಿರ ಶುಕ್ಲ ದ್ವಿತಿಯಾ ಅಂದರೆ ಡಿ.13 ಭಾನುವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸಿನಲ್ಲಿ ಪ್ರಾಂತೀಯ ಹಿಂದೂ ಅಧಿವೇಶನವನ್ನು ಆಯೋಜಿಸಿತು. ಈ ಅಧಿವೇಶನವನ್ನು ದೀಪಪ್ರಜ್ವಲನದ ಮೂಲಕ ಉದ್ಘಾಟಿಸಲಾಯಿತು. ಅಧಿವೇಶದಲ್ಲಿ ಪ್ರಮುಖ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ, ಸಂಕಷ್ಟಹರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಬ್ರಹ್ಮಶ್ರೀ ಉಮೇಶ ಶರ್ಮ ಗುರೂಜಿ, ಉಚ್ಛನ್ಯಾಯಾಲಯದ ನ್ಯಾಯವಾದಿಗಳಾದ ಹಿಂದೂ ವಿಶ್ವ ಪರಿಷತ್ತಿನ ಕರ್ನಾಟಕದ ಸಮನ್ವಯಕರಾದ ಶ್ರೀ. ಅಮೃತೇಶ ಎನ್. ಪಿ, ಉದ್ಯಮಿಗಳಾದ ಶ್ರೀ. ರಮೇಶ, ಸನಾತನ ಸಂಸ್ಥೆಯ ಸೌ. ಶೀಲಾ ನಾರಾಯಣ, ಯೋಗ ಶಿಕ್ಷಕರಾದ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟಿನ ಜಿಲ್ಲಾ ಪ್ರಭಾರಿಯಾದ ಶ್ರೀ. ದಿವಾಕರ ಭಟ್, ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ವಿಷ್ಣು ಶಂಕರ ಜೈನ, ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರಿನ ಸಮನ್ವಯಕರಾದ ಶ್ರೀ. ಸುರೇಶ ಹೆರೂರು, ಉಚ್ಛನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ವಿವೇಕ ಸಿಂಹ, ಧರ್ಮಾಭಿಮಾನಿಗಳಾದ ಶ್ರೀ. ಪ್ರೀತೇಶ ಹಾಗೂ ಇತರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಹಿಂದೂರಾಷ್ಟ್ರದ ಧ್ಯೇಯವನ್ನಿಟ್ಟುಕೊಂಡವರಿಗೆ ಬಹಳ ವಿರೋಧಿಗಳಿದ್ದರೂ ಭಗವಂತನ ಅಧಿಷ್ಟಾನದಿಂದ ಹಿಂದೂರಾಷ್ಟ್ರವನ್ನು ಪ್ರಾಣ ತೆತ್ತಾದರೂ ಸ್ಥಾಪಿಸುತ್ತೇವೆ – ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ
ದೇಶವನ್ನು 1947ರಲ್ಲಿ ಧರ್ಮದ ಆಧಾರದಲ್ಲಿ ವಿಭಜನೆ ಮಾಡಲಾಯಿತು ಆದರೆ ಹಿಂದೂರಾಷ್ಟ್ರ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದಕ್ಕೆ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅನೇಕ ಬಾರಿ ನಿರ್ಬಂಧವನ್ನು ಎದುರಿಸಿತು ಇಂದು ಸನಾತನ ಸಂಸ್ಥೆಯ ಮೇಲೆಯೂ ಇದೇ ಕಾರಣದಿಂದ ನಿರ್ಬಂಧದ ಛಾಯೆ ಆವರಿಸುತ್ತಿದೆ. ಧರ್ಮದ ಮೇಲೆ ಆಘಾತ ಬಂದಾಗ ಭಗವಂತನು ಅನೇಕ ಅವತಾರಗಳನ್ನು ತಾಳಿ ಧರ್ಮದ ರಕ್ಷಣೆಯನ್ನು ಮಾಡಿದ್ದಾನೆ. ಧರ್ಮದ ರಕ್ಷಣೆಯನ್ನು ಮಾಡುವವರಿಗೆ ಅನೇಕ ವಿರೋಧಿಗಳಿರುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರು 2 ಗುರುಗಳ ಮಾರ್ಗದರ್ಶನದಿಂದ ಹಾಗೂ ದೇವಿಯ ಆಶೀರ್ವಾದದಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದವೀ ರಾಷ್ಟ್ರವನ್ನು ಸ್ಥಾಪಿಸಿದರು. ಇಂದಿಗೂ ಈ ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದಲ್ಲಿ ಅನೇಕ ವಿರೋಧಿಗಳಿದ್ದರೂ ಭಗವಂತನ ಅಧಿಷ್ಟಾನದಿಂದಲೇ ಹಿಂದೂರಾಷ್ಟ್ರದ ಸ್ಥಾಪನೆಯಾಗುವುದು.
ಜಾತಿಗಳ ಆಧಾರದಲ್ಲಿ ಗುರುಗಳನ್ನು ವಿಂಗಡಿಸದೇ ಹಿಂದೂ ಧರ್ಮದ ಎಲ್ಲ ಗುರುಗಳನ್ನು ಗೌರವಿಸಬೇಕು. – ಡಾ. ಬ್ರಹ್ಮಶ್ರೀ ಉಮೇಶ ಶರ್ಮ ಗುರೂಜಿ
ನಮ್ಮದು ದೇವಾಲಯಗಳ ನಾಡು, ನಮ್ಮ ಪ್ರತಿಯೊಂದು ಶಾಸ್ತ್ರಕ್ಕೂ ವೈಜ್ಞಾನಿಕ ಹಿನ್ನೆಲೆಯಿದೆ. ಆದ್ದರಿಂದ ದೇವಸ್ಥಾನಗಳ ಮೊದಲಿಗೆ ಎಲ್ಲರಿಗೂ ಧರ್ಮಶಿಕ್ಷಣವನ್ನು ನೀಡುವ ಕಾರ್ಯವನ್ನು ಮಾಡಬೇಕು. ಒಂದು ದೇವಸ್ಥಾನದ ಶಂಕುಸ್ಥಾಪನೆಯನ್ನು ರಾಜಕಾರಣಿಗಳ ಖಾಸಗಿ ಕಾರಣಕ್ಕಾಗಿ ಮುಂದೂದಲಾಯಿತು. ನಾವು ದೇವಸ್ಥಾನದಲ್ಲಿ ರಾಜಕಾರಣವನ್ನು ತರಲು ಕೊಡಬಾರದು.
ಹಿಂದೂಗಳ ಹಿತಕ್ಕಾಗಿ ಕಾನೂನು ಬದ್ಧ ಹೋರಾಟಕ್ಕೆ ಹಿಂದೂ ವಿಧಿಜ್ಞಪರಿಷತ್ತು ಸದಾ ಸಿದ್ಧ – ಶ್ರೀ. ಅಮೃತೇ ಎನ್.ಪಿ, ನ್ಯಾಯವಾದಿಗಳು, ಉಚ್ಛನ್ಯಾಯಾಲಯ, ಬೆಂಗಳೂರು
ಮೇಲುಕೋಟೆಯ ದೇವಸ್ಥಾನದಲ್ಲಿ ದೇವರಿಗೆ ತಿಲಕವನ್ನು ಹೇಗೆ ಹಚ್ಚುವುದು ಎಂಬುದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ತೀರ್ಮಾನವಾಗುವುದು ಅತ್ಯಂತ ವಿಪರ್ಯಾಸವಾಗಿದೆ. ಓರ್ವ ವಿದೇಶಿಯನು ತನ್ನ ಕಾಲಿನ ಮೇಲೆ ರೇಣುಕಾಂಬೆಯ ಟ್ಯಾಟೂ ಮಾಡಿರುವುದರ ಬಗ್ಗೆ ಹಿಂದೂಗಳು ಆಕ್ಷೇಪವೆತ್ತಿದರೆ ಅದರ ಬಗ್ಗೆ ಏನೂ ಆಗುವುದಿಲ್ಲ ಆದರೆ ಆ ವಿದೇಶಿಯನು ಇತರ ಧರ್ಮೀಯರ ದೇವರ ಚಿತ್ರವನ್ನು ಹಾಕಿದ್ದರೆ ಚಿತ್ರಣವೇ ಬೇರೆ ಇತ್ತು. ಮಾದೇಶ್ವರ ದೇವಸ್ಥಾನದಲ್ಲಿ ಅರ್ಪಣೆಗಾಗಿ ಕೊಟ್ಟ ಗೋವುಗಳನ್ನು ಕಸಾಯಿಖಾನೆಗೆ ಮಾರಲಾಗುತ್ತಿದೆ. ಕುಕ್ಕೆ ಸುಬ್ರಮಣ್ಯದ ಸುಪ್ರಭಾತದ ಬಗ್ಗೆ ಹಿಂದೂಗಳೇ ಆಕ್ಷೇಪವೆತ್ತುತ್ತಿದ್ದಾರೆ. ಇದು ವಿಪರ್ಯಾಸವಾಗಿದೆ. ಮುಜಿರಾಯಿ ಇಲಾಖೆಯಲ್ಲಿ ಇತರ ಧರ್ಮೀಯರಿದ್ದಾರೆ ಆದರೆ ವಕ್ಫ ಬೋರ್ಡನಲ್ಲಿ ಹಿಂದೂಗಳನ್ನು ತೆಗೆದಕೊಳ್ಳುವರೇ? ಹಿಂದೂ ವಿಧಿಜ್ಞಪರಿಷತ್ತು ಹಿಂದೂ ಹಿತಕ್ಕಾಗೆ ಸದಾ ಸಿದ್ಧವಿದೆ.
ನಮ್ಮಿಂದ ಆದಷ್ಟು ತನು ಮನ ಮತ್ತು ಧನದ ತ್ಯಾಗ ಮಾಡಿ ದೇಶ ಮತ್ತು ಧರ್ಮದ ಪ್ರತಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ – ಶ್ರೀ. ರಮೇಶ, ಉದ್ಯಮಿಗಳು
ನಮಗೆ ತನು ಮತ್ತು ಮನದಿಂದ ಸೇವೆ ಮಾಡಲು ಸಾಧ್ಯವಾಗದಿದ್ದರೂ ಧನದ ಅರ್ಪಣೆ ಮಾಡಬಹುದು. ನಮಗೆ ತಿರುಪತಿಯಲ್ಲಿ ಇಸ್ಲಾಮಿಕ ವಿಶ್ವವಿದ್ಯಾಲಯದ ಬಗ್ಗೆ ತಿಳಿದಾಗ ನಾವು 30 ಜನರೊಂದಿಗೆ ಅಲ್ಲಿ ಹೋಗಿ ಆಂದೋಲನಗಳನ್ನು ಮಾಡಿದೆವು. ನಾವು ಸ್ವದೇಶಿ ಉತ್ಪಾದನೆಗಳನ್ನು ಬಳಸಬೇಕು ಹಾಗೂ ಶೇ. 100 ರಷ್ಟು ಮತದಾನ ಮಾಡಿ ನಮ್ಮಿಂದ ಆದಷ್ಟು ಸಹಭಾಗವನ್ನು ಕೊಡೋಣ.
ಧರ್ಮರಕ್ಷಣೆಯ ಕಾರ್ಯವನ್ನು ಸಾಧನೆ ಬಲದಿಂದ ಮಾನಸಿಕ ಸ್ಥರದಲ್ಲಿ ಅಲ್ಲ ಆಧ್ಯಾತ್ಮಿಕ ಸ್ಥರದಲ್ಲಿ ಮಾಡೋಣ ! – ಸೌ. ಶೀಲಾ ನಾರಾಯಣ, ಸನಾತನ ಸಂಸ್ಥೆ
ಜಂತುನಾಂ ನರ ಜನ್ಮದುರ್ಲಭಂ ಅಂದರೆ ನರ ಜನ್ಮ ಅತ್ಯಂತ ಶ್ರೇಷ್ಠವಾದುದಾಗಿದೆ. ನಮ್ಮ ಧರ್ಮವು ಪ್ರಾಣಿಮಾತ್ರರಿಗೆ ಆನಂದ ಪ್ರಾಪ್ತಿಯ ಮಾರ್ಗವನ್ನು ತೋರಿಸುವ ಅತ್ಯಂತ ಶ್ರೇಷ್ಠವಾಗಿದೆ. ಇತರ ಧರ್ಮದ ಜ್ಞಾನವು ನಮ್ಮ ಧರ್ಮದ ಜ್ಞಾನದ 1 ಲಕ್ಷಾಂಶದಷ್ಟಿದೆ. ಇಂತಹ ಮಹತ್ವದ ಧರ್ಮದ ಬಗ್ಗೆ ನಮಗೆ ಏನು ತಿಳಿದಿದೇ? ಧರ್ಮದ ಬಗ್ಗೆ ನಮಗೆ ಜ್ಞಾನವಿಲ್ಲದಿರುವುರಿಂದ ಮತ್ತು ಅಭಿಮಾನವಿಲ್ಲದಿರುವುದರಿಂದ ನಮ್ಮಿಂದಲೇ ಧರ್ಮದ ಮೇಲೆ ಆಘಾತಕಾರಿ ಘಟನೆಗಳಾಗುತ್ತಿವೆ. ನಾವು ಸಾಧನೆಯನ್ನು ಮಾಡಿ ನಮ್ಮ ಬ್ರಾಹ್ಮ ತೇಜವನ್ನು ಜಾಗೃತಗೊಳಿಸಬೇಕು ಹಾಗೂ ಧರ್ಮಕಾರ್ಯವನ್ನು ಮಾನಸಿಕ ಸ್ಥರದಲ್ಲಿ ಅಲ್ಲದೇ ಆಧ್ಯಾತ್ಮಿಕ ಸ್ಥರದಲ್ಲಿ ಮಾಡೋಣ.
ರಾಮಮಂದಿರವನ್ನು ಸ್ಥಾಪಿಸುವುದು ಹಿಂದೂ ರಾಷ್ಟ್ರದ ಸ್ಥಾಪನೆಯೇ ಆಗಿದೆ, ರಕ್ತದಿಂದ ಸಹಿ ಮಾಡಿ ಪ್ರಧಾನಮಂತ್ರಿಗಳ ಬಳಿ ರಾಮಮಂದಿರದ ನಿರ್ಮಾಣದ ಬೇಡಿಕೆಯನ್ನಿಡೋಣ ! – ಶ್ರೀ. ವಿಷ್ಣು ಶಂಕರ ಜೈನ, ನ್ಯಾಯವಾದಿಗಳು, ಸರ್ವೋಚ್ಛ ನ್ಯಾಯಾಲಯ
ನಾವು ರಾಮ ಮಂದಿರ ಹಾಗೂ ತಾಜಮಹಲಿನ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ. ದೇವಸ್ಥಾನಗಳನ್ನು ಸ್ಥಾಪಿಸುವುದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತದೆ. ಹಿಂದೆ ಮೊಘಲರು ನಮ್ಮ ಸಂಸ್ಕೃತಿಯ ಮೂಲ ಸ್ಥಾನವಾಗಿದೆ ಎಂದು ದೇವಸ್ಥಾನಗಳನ್ನು ನಾಶಗೊಳಿಸಿದರು. ಇಂದಿಗೂ ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಮೂರ್ತಿಯನ್ನು ಟಾರಪಾಲ್ ಹಾಕಿ ಇಡಲಾಗಿದೆ ಅದಕ್ಕೂ ನ್ಯಾಯಾಲಯದ ಅನುಮತಿ ಪಡೆಯಬೇಕಿದೆ. ನಾವು ಒಳ್ಳೆಯ ಮನೆಯಲ್ಲಿ ಇದ್ದು ನಾವು ಪೂಜಿಸುವ ದೇವರನ್ನು ಹೀಗೆ ಇಡುವುದು ಅಪಮಾನಕಾರಿಯಾಗಿದೆ. ಬಾದಶಹಾನಾಮಾದಲ್ಲಿ ತಾಜಮಹಲನ್ನು ಶಹಜಹಾನನು ಕಟ್ಟಿರುವುದರ ಉಲ್ಲೇಖವೇ ಇಲ್ಲ. ಅಲ್ಲಿ ಗೋರಿಗಳಲ್ಲ ಧ್ವಂಸಗೊಂಡ ಶಿವಲಿಂಗಗಳಿವೆ. ಹೇಗಾದರೂ ಮಾಡಿ ರಾಮಂದಿರವನ್ನು ಸ್ಥಾಪಿಸಲು ಪ್ರಯತ್ನಿಸೋಣ.
ಹಿಂದೂಗಳ ಮೇಲಿನ ಆಘಾತಗಳ ವಿರುದ್ಧ ಕಾನೂನು ಬದ್ಧವಾಗಿ ರಾಷ್ಟ್ರೀಯ ಹಿಂದೂ ಆಂದೋಲನದ ಮೂಲಕ ಹೋರಾಡೋಣ! – ಶ್ರೀ. ಸುರೇಶ ಹೇರೂರು, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
ರಾಷ್ಟ್ರದಾದ್ಯಂತ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಿಂದೂ ಆಂದೋಲನಗಳ ಮಾಧ್ಯಮದಿಂದ ಹೋರಾಡುತ್ತಿದೆ. ಈ ರಾಷ್ಟ್ರೀಯ ಹಿಂದೂ ಆಂದೋಲನವು ರಾಷ್ಟ್ರದಾದ್ಯಂತ ಒಂದೇ ದಿನ ಒಂದೇ ವಿಷಯದ ಮೇಲೆ ನಡೆಯುತ್ತದೆ. ಈ ಆಂದೋಲನವು ಪ್ರತಿ ತಿಂಗಳ ಎರಡನೇಯ ಭಾನುವಾರದಂದು ನಡೆಯುವುದು. ತಾವೆಲ್ಲರೂ ಈ ಆಂದೋಲನಗಳಲ್ಲಿ ಭಾಗವಹಿಸಿ ಹಿಂದೂರಾಷ್ಟ್ರ ಸ್ಥಾಪನೆಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡೋಣ.
ಯಾರಿಗೆ ಬೇಕಾದ ಸರಕಾರ ಸಿಗಲಿಲ್ಲವೋ ಅವರಿಗೆ ದೇಶವು ಅಸಹಿಷ್ಣು ಎಂದು ಅನಿಸುತ್ತಿದೆ – ಶ್ರೀ. ವಿವೇಕ ಸಿಂಹ, ನ್ಯಾಯವಾದಿಗಳು, ಉಚ್ಛನ್ಯಾಯಾಲಯ, ಬೆಂಗಳೂರು.
ನಮ್ಮ ದೇಶವನ್ನು ಅಸಹಿಷ್ಣು ಎಂದು ಕೆಲವರು ಬೊಬ್ಬೆ ಇಡುತ್ತಿದ್ದಾರೆ. ವಾರ್ತಾವಾಹಿಗಳೂ ಈ ವಿಷಯಕ್ಕೆ ಕುಮ್ಮಕ್ಕು ಕೊಡುತ್ತಿವೆ. ನಮ್ಮದು ವೇದಪರಂಪರೆ ಇದ್ದರೂ ನಾವು ಜೈನರು, ಬೌದ್ಧರು, ಮುಸಲ್ಮಾನರು ಕ್ರೈಸ್ತರನ್ನೂ ಸ್ವಾಗತಿಸಿದ್ದೇವೆ. ಮೆಕ್ಕಾ ಮದೀನಾದ ನಂತರ ಮೊದಲನೇಯ ಮಸೀದಿಯನ್ನು ಭಾರತದಲ್ಲಿಯೇ ಆರಂಭಿಸಿದ್ದು ಎಂಬುದರ ಉಲ್ಲೇಕವನ್ನು ಮಾಡಲಾಗುತ್ತದೆ. ಇಂತಹ ದೇಶವನ್ನು ಅಸಹಿಷ್ಣು ಎಂದು ಹೇಳುವವರು ತಮಗೆ ಬೇಕಾದ ಸರಕಾರ ಸಿಗದಿರುವುದರಿಂದ ಬೊಬ್ಬೆ ಇಡುತ್ತಿದ್ದಾರೆ.
ನಾವು ಹೇಡಿಗಳಂತೆ ಲವ್ ಜಿಹಾದನಿಂದಲ್ಲ ವೀರರಂತೆ ಹೋರಾಡುತ್ತೇವೆ – ಶ್ರೀ. ಪ್ರೀತೇಶ
ಲವ್ ಜಹಾದ ಎಂದು ಮುಸಲ್ಮಾನ ಹುಡುಗರು ಹಿಂದೂ ಹುಡುಗಿಯರನ್ನು ಮೋಸಗೊಳಿಸುತ್ತಾರೆ. ಗಡ್ಡ ಬಿಟ್ಟು ಸ್ನಾನ ಮಾಡದೇ ಸಂಸ್ಕಾರವಿಲ್ಲದಂತಹ ಮುಸಲ್ಮಾನರು ಹಿಂದೂ ಹುಡುಗಿಯರನ್ನು ಮೋಸಗೊಳಿಸುತ್ತಿದ್ದಾರೆ. ನಮ್ಮ ಹಿಂದೂಗಳು ಇದೇ ರೀತಿ ಪ್ರಾರಂಭಿಸಿದರೆ ಮುಸಲ್ಮಾನರಲ್ಲಿ ಹುಡುಗಿಯರೇ ಇರುವುದಿಲ್ಲ. ಆದರೆ ನಾವು ಹೇಡಿಗಳಂತೆ ಅಲ್ಲ ಖಡ್ಗ ಹಿಡಿದು ಹೋರಾಡುವವರಾಗಿದ್ದೇವೆ. ಇಂದು ಅನೇಕ ಮುಸಲ್ಮಾನ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಲು ಇಚ್ಛಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇಂತಹ ಹುಡುಗಿಯರೂ ಹಿಂದೂಗಳೇ ಆಗಿದ್ದರೆಂದು ತಿಳಿದು ಅವರನ್ನು ನಮ್ಮ ಧರ್ಮಕ್ಕೆ ಸ್ವೀಕರಿಸೋಣ.
ತ್ಯಾಗವಿಲ್ಲದೇ ಎನೂ ಸಾಧ್ಯವಿಲ್ಲ. ನಮ್ಮ ಆಶ್ರಯ ಸನಾತನಕ್ಕಲ್ಲ ಸನಾತನದ ಆಶ್ರಯ ನಮಗಿದೆ – ಶ್ರೀ. ದಿವಾಕರ ಭಟ್, ಭಾರತ ಸ್ವಾಭಿಮಾನ ಟ್ರಸ್ಟ್
ಪುರಾಣಕಾಲದಿಂದ ನೋಡಿದರೂ ತ್ಯಾಗವಿಲ್ಲದೇ ಏನೂ ಸಾಧ್ಯವಿಲ್ಲ. ಭಯವಿದ್ದಾಗ ಏನೂ ಸಾಧ್ಯವಾಗುವುದಿಲ್ಲ. ದೇಶಕ್ಕಾಗಿ ಸಮರ್ಪಣಾಭಾವವಿರಬೇಕು ಇದರಿಂದಲೇ ಹಿಂದೂರಾಷ್ಟ್ರ ಸ್ಥಾಪನೆಯು ಸಾಧ್ಯವಿದೆ. ನಾನು ಸನಾತನ ಸಂಸ್ಥೆಯ ಸಂಸ್ಥಾಪಕರನ್ನು ನಾನು ಭೇಟಿಯಾಗಿದ್ದೇನೆ, ಅವರು ಅತ್ಯಂತ ಸರಳ ಜೀವಿಗಳು. ವಿದೇಶದಲ್ಲಿದ್ದು ಬೇಕಾದಷ್ಟು ಹಣಗಳಿಸಲು ಸಾಧ್ಯವಿದ್ದರೂ ಆಧ್ಯಾತ್ಮಿಕ ಜ್ಞಾನದ ಸೇವೆಯನ್ನು ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯು ಸಂತ ಶಕ್ತಿಯನ್ನು ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದೆ. ನಮ್ಮ ಆತ್ಮವಿಶ್ವಾಸವು ಎಷ್ಟು ಹದಗೆಟ್ಟಿದೆ ಎಂದರೆ ಹುಟ್ಟಿರುವುದು ಕೇವಲ ಹೊಟ್ಟೆಪಾಡಿಗೆ ಹುಟ್ಟಿದ್ದೇವೆ ಎಂಬಂತೆ ನಮ್ಮ ವೃತ್ತಿಯಾಗಿದೆ. ನಮ್ಮ ಆಶ್ರಯ ಸನಾತನಕ್ಕಲ್ಲ ಸನಾತನದ ಆಶ್ರಯ ನಮಗಿದೆ.
ಹಣಕ್ಕಾಗಿ ಯಾವ ಮಟ್ಟಿಗೆ ಹೋಗುವ ನಟಿಯರು ನಮ್ಮ ಆದರ್ಶವಾಗಿದ್ದಾರೆ ಅದರೆ ವೀರ ವನಿತೆಯರಲ್ಲ – ಸೌ. ಅನುಪಮಾ ರೆಡ್ಡಿ, ಸಮಾಜಸೇವಕಿ
ಧರ್ಮಕಾರ್ಯದಲ್ಲಿ ಮಹಿಳೆಯರು ಸಹಭಾಗಿಯಾಗುವುದು ಕಡಿಮೆ ಆದರೆ ಸಿನೆಮಾ ನೋಡಲು, ಶಾಪಿಂಗ ಗೆ ಮಹಿಳೆಯರೇ ಜಾಸ್ತಿ. ಮಹಿಳೆಯರು ಎಲ್ಲಿಯವರೆಗೆ ತಮ್ಮನ್ನು ತಾವು ರಕ್ಷಿಸುವುದಿಲ್ಲ ಅಲ್ಲಿಯವರೆಗೂ ಯಾರಿಗೂ ನಮ್ಮ ರಕ್ಷಣೆ ಮಾಡಲು ಸಾಧ್ಯವಿಲ್ಲ. ಸನಾತನ ಸಂಸ್ಥೆಯ ಸಂಸ್ಥಾಪಕರ ಭೇಟಿಯ ನಂತರ 1 ಹಳ್ಳಿಯಿಂದ ನಾನು 11 ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಮಹಿಳಾ ವರ್ಗಗಳನ್ನು ನಡೆಸುತ್ತಿದ್ದೇನೆ ಹಾಗೂ ಅವರಿಗೆ ಧರ್ಮಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ.
ರಾಜಕೀಯ ಸ್ವಾರ್ಥವಲ್ಲ, ಕೇವಲ ಒಂದು ಸಮುದಾಯಕ್ಕಲ್ಲ ,ಧರ್ಮಾಧಾರಿತ ಹಾಗೂ ರಾಷ್ಟ್ರನಿಷ್ಠ ವ್ಯವಸ್ಥೆಯೇ ಹಿಂದೂ ರಾಷ್ಟ್ರ ! – ಶ್ರೀ. ಹರ್ಷವರ್ಧನ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದೂ ರಾಷ್ಟ್ರವನ್ನು ಸಮಾಜವಾದ ಎಂಬ ಹೆಸರಿನಲ್ಲಿ ಹಸಿರುಕರಣ ಮಡಲಾಗುತ್ತಿದೆ. ಸಂತರ ಸಂಕಲ್ಪದಿಂದಲೇ ಕಾರ್ಯವಾಗುವುದಿದ್ದರೂ ಧರ್ಮಕರ್ತವ್ಯವೆಂದು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಕೈಜೋಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎಷ್ಟೋ ಹಿಂದೆ ರಾಮರಾಜ್ಯವಿದ್ದರೂ ಇಂದಿಗೂ ನಾವು ರಾಮರಾಜ್ಯವನ್ನು ನೆನೆಯುತ್ತೇವೆ, ಆದರೆ ಇಂದು ನಮ್ಮ ದೇಶದ ಸ್ತೀತಿ ಹೇಗಿದೆ. ವಿಚಾರ ಮಾಡಿದರೆ ಎಲ್ಲ ರೀತಿಯಲ್ಲಿ ದೇಶವು ಅಧೋಗತಿಗೆ ಹೋಗುತ್ತಿದೆ. ಹಿಂದೂರಾಷ್ಟ್ರದಿಂದ ಸಮಾಜಕ್ಕೆ ಆಧ್ಯಾತ್ಮದ ವಿಷಯ ತಲುಪಿ ಜಗತ್ತಿನ ಕಲ್ಯಾಣವಾಗುತ್ತದೆ.
ಮಾಹಿತಿ ಹಕ್ಕು ಕಾನೂನಿನ ಲಾಭ ಪಡೆದು ಪ್ರತಿಯೊಬ್ಬರೂ ಸರಕಾರ ಹೆಜ್ಜೆ ಪ್ರಶ್ನಿಸಬೇಕು – ಶ್ರೀ. ಎ. ಆರ್. ಶಶಿಕುಮಾರ, ನ್ಯಾಯವಾದಿಗಳು, ಉಚ್ಛನ್ಯಾಯಾಲಯ
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಆದರೆ ಪ್ರಜೆಗಳು ಪ್ರಶ್ನೆ ಮಾಡದಿರುವುದರಿಂದ ಪ್ರಜೆಗಳು ತುಚ್ಛರಾಗಿದ್ದಾರೆ. ಇಂದು ನಾವು ನಮ್ಮ ಸುತ್ತಲಿನ ವಿಷಯಗಳ ಬಗ್ಗೆ ಏನೂ ಕೇಳುವುದಿಲ್ಲ. ಗೋವುಗಳು ಮೂಕ ಪ್ರಾಣಿಗಳು, ಅವು ಮತ ಕೊಡದಿರುವುದರಿಂದ ಅವುಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ನಮ್ಮ ದೇಶದ ಭವಿಷ್ಯಕ್ಕಾಗಿ ನಾವು ಮಾಹಿತ ಹಕ್ಕು ಕಾನೂನಿನಿಂದ ಹೋರಾಡಬೇಕು. ದೇಶವನ್ನು ಶೇ. 2 ರಷ್ಟು ಜನ ಆಳುತ್ತಿದ್ದಾರೆ ಅದರೆ ಶೇ. 98% ಜೀತದಾಳುಗಳಾಗಿದ್ದೇವೆ. ನಿಜವಾದ ಪ್ರಜಾಪ್ರಭುತ್ವದ ಕಾರ್ಯಕ್ರಮ ಬರಬೇಕಾದರೆ ಮಾಹಿತಿ ಹಕ್ಕು ಕಾನೂನು ಬಳಸಿ.


