ಬಂಟ್ವಾಳ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಶಿಷ್ಟ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ತಾಲೂಕಿನ ಮೂಡುನಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ತನ್ನ ತಿಂಗಳ ಇರುಳು ಕಾರ್ಯಕ್ರಮದಡಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶ್ರಮದಾನದ ಮೂಲಕ ದುರಸ್ತಿ ಕಾರ್ಯಗಳನ್ನು ಮಾಡುತ್ತಾ ಗಮನ ಸೆಳೆದಿದ್ದ ಫ್ರೆಂಡ್ಸ್ ಕ್ಲಬ್ ಬರಿಮಾರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೀರ್ಣವಸ್ಥೆಯಲ್ಲಿದ್ದ ಕೊಠಡಿಯನ್ನು ಶ್ರಮದಾನದ ಮೂಲಕ ಪುನರ್ ನಿರ್ಮಿಸಿಕೊಡಲು ಮುಂದಾಗಿದೆ.

ಬರಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಂಗಳ ಇರುಳು ಕಾರ್ಯಕ್ರಮದ ಮೂಲಕ ಶ್ರಮದಾನ ನಡೆಸಲು ಮುಂದಾದ ಫ್ರೆಂಡ್ಸ್ಕ್ಲಬ್ ಇಲ್ಲಿ ವಿದ್ಯಾರ್ಥಿಗಳಿಗೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಕೊಠಡಿಗಳನ್ನು ಗಮನಿಸಿ ಸಂಪೂರ್ಣವಾಗಿ ಪುನರ್ ನಿರ್ಮಿಸಲು ಉದ್ದೇಶಿತ್ತು. ಗ್ರಾಮಸ್ಥರ ಸಹಕಾರದೊಂದಿಗೆ ಕೊಠಡಿ ಪುನರ್ ನಿರ್ಮಿಸುವ ಹಿನ್ನಲೆಯಲ್ಲಿ ಭಾನುವಾರ ಶ್ರಮದಾನದ ಮೂಲಕ ಹಳೆ ಕಟ್ಟಡ ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ಸಂಘಟನೆಯ ಮೂವತ್ತಕ್ಕಿಂತಲೂ ಹೆಚ್ಚು ಮಂದಿ ಯುವಕರು ಶ್ರಮದಾನದಲ್ಲಿ ಭಾಗವಹಿಸಿ ಹಂಚು, ಛಾವಣಿಯನ್ನು ತೆರವುಗೊಳಿಸಿದರು. ಬಳಿಕ ಜೆಸಿಬಿ ಬಳಸಿ ಕಟ್ಟಡ ದರಶಾಹಿಗೊಳಿಸಲಾಯಿತು.
ಬರಿಮಾರು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು ಅವರು ಶ್ರಮದಾನಕ್ಕೆ ಚಾಲನೆ ನೀಡಿದರು. ಸರ್ಕಾರಿ ಶಾಲೆಗಳನ್ನು ಉಳಿಸುವ ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್ನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಮಾತ್ರವಲ್ಲದೆ ಪುನರ್ ನಿಮರ್ಾಣ ಕಟ್ಟಡಕ್ಕೆ ತನ್ನ ಆರ್ಥಿಕ ನೆರವನ್ನು ಘೋಷಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ಕ್ಲಬ್ನ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಕ್ಲಬ್ ಮೂಲಕ ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಈ ಕಾರ್ಯಕ್ಕೆ ಗ್ರಾಮಸ್ಥರೆಲ್ಲರೂ ಸ್ವಯಂಪ್ರೇರಿತರಾಗಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಬರಿಮಾರು ಗ್ರಾ.ಪಂ.ಅಧ್ಯಕ್ಷ ವಸಂತ ಪಟ್ಲಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಪಿ., ಉಪಾಧ್ಯಕ್ಷೆ ಯಶೋಧಾ, ಬರಿಮಾರು ಶ್ರೀ ದೇವಿ ಭಜನಾಮಂಡಳಿ ಅಧ್ಯಕ್ಷ ಜಯಂತ ಬರಿಮಾರು, ಶ್ರೀ ದುಗರ್ಾ ಫೆಂಡ್ಸ್ಕ್ಲಬ್ನ ಶೇಖರ ಅಂಚನ್, ಗಣೇಶ್ಗೌಡ, ಸಂತೋಷ್ಗೌಡ, ಯಶೋಧರ, ವಿಠಲ.ಡಿ., ರಮೇಶ್ ಕುಲಾಲ್, ನವೀನ್ ಸೇಸಗುರಿ, ರಾಮಚಂದ್ರ ಪೂಜಾರಿ, ಪೂವಪ್ಪ ಮೆಂಡನ್, ಗೋಪಾಲ ಕುದನೆ, ಸೀತಾರಾಮ, ಗಂಗಾಧರ, ಪ್ರಶಾಂತ್ ಹಾಜರಿದ್ದರು. ಪುರಷೋತಮ್ಮ ಅಂಚನ್ ಸ್ವಾಗತಿಸಿ, ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕಲ್ಯಾಣಿ ಜಿ. ವಂದಿಸಿದರು. ಮುಂದಿನ ಎರಡು ವಾರದೊಳಗಾಗಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಲಿದೆ.
