ಏಕೀಭಾವ ಬೆಳೆದಾಗಲೇ ಸಮಾಜದ ಉನ್ನತಿ ಸಾಧ್ಯ: ರಿಚಾರ್ಡ್ ಡಿ’ಸೋಜಾ
ಮುಂಬಯಿ: ಬೃಹನ್ಮುಂಬಯಿಯ ಅಲ್ಲಿನ ಲಯನ್ ಗೇಟ್ ಸನಿಹದಲ್ಲಿ ಸಾಮಾಜಿಕ ಸೇವೆಗೈದು ಶ್ರಮಿಸುತ್ತಿರುವ ಸೈಂಟ್ ಪಾವ್ಲ್’ಸ್ ಕಥೊಲಿಕ್ ಅಸೋಸಿಯೇಶನ್ ಮುಂಬಯಿ ತನ್ನ 73ನೇ ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ದಿನಾಚರಣೆಯನ್ನು ಇಂದಿಲ್ಲಿ ರವಿವಾರ ಫೆÇೀರ್ಟ್ (ವಿ.ಟಿ) ಪರಿಸರದ ಶಹೀದ್ ಭಗತ್‍ಸಿಂಗ್ ರಸ್ತೆಯಲ್ಲಿನ ಸಂಸ್ಥೆಯ ಸಭಾಗೃಹದಲ್ಲಿ ಅದ್ದೂರಿಯಿಂದ ನೇರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಕೊಲಬಾ ಅಲ್ಲಿನ ವುಡ್‍ಹೌಸ್ ಹೊಲಿನೇಮ್ ಕಾಥೆದ್ರಾಲ್ ಚರ್ಚನಲ್ಲಿ ಸಂಭ್ರಮಿಕ ಅಬಿವಂದನಾ ಪೂಜೆ ಸಂಭ್ರಮಿಸಿದ್ದು, ರೆ| ಫಾ| ಜೋಕಿಂ ಡಿ’ಸೋಜಾ ಅವರು ಕೊಂಕಣಿಯಲ್ಲಿ ಬಲಿಪೂಜೆನೆರವೇರಿಸಿ ಶುಭಾರೈಸಿದರು. ಪೂರ್ವಾಹ್ನ ಸೈಂಟ್ ಪಾವ್ಲ್’ಸ್ ನಿವಾಸದ ಸಭಾಗೃಹದಲ್ಲಿ ಸರಳ ಸಂಭ್ರಮಾಚರಣಾ ಕಾರ್ಯಕ್ರಮ ಅಯೋಜಿಸಿದ್ದು, ಶ್ರೀಮತಿ ಸೆವ್ರಿನ್ ಐ.ಕ್ವಾಡ್ರಸ್, ರೆನಿಟಾ ಜೆ.ಲಸ್ರಾದೊ, ಗೀತಾ ಎಸ್. ಡಿ’ಸಿಲ್ವಾಅವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

St. Paul's Catholic Assn-3
St. Paul's Catholic Assn-1

St. Paul's Catholic Assn-2

 

St. Paul's Catholic Assn-5

St. Paul's Catholic Assn-11

St. Paul's Catholic Assn-15

St. Paul's Catholic Assn-17

St. Paul's Catholic Assn-22

St. Paul's Catholic Assn-25

St. Paul's Catholic Assn-26

St. Paul's Catholic Assn-A1

St. Paul's Catholic Assn-A2

??????????

??????????

??????????ವೇದಿಕೆಯಲ್ಲಿ ಅತಿಥಿ ಗಣ್ಯರಾಗಿ ಯುವ ಉದ್ಯಮಿ ಮತ್ತು ಮಾಜಿ ಅಧ್ಯಕ್ಷ ಸ್ಟ್ಯಾನಿ ಫೆರ್ನಾಂಡಿಸ್, ಗೌರವ ಅತಿಥಿsಗಳಾಗಿ ಆ್ಯಂಟನಿ ಡಿ’ಸೋಜಾ, ಪ್ರಾನ್ಸಿಸ್ ಮಥಾಯಸ್, , ತೋಮಸ್ ನೊರೋನ್ಹಾ, ಉಪಸ್ಥಿತರಿದ್ದರು. ಸರ್ವರೂ ಒಗ್ಗೂಡಿ ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸಿ ಅವರ ಸ್ಮರಣೆಗೈದರು. ನಂತರ ಸೈಂಟ್ ಪಾವ್ಲ್‍ಅವರ ಪ್ರತಿಮೆಯ ಸ್ಮರಣಿಕೆ ಹಾಗೂ `ಜೀವಿತ್’ ಸ್ಮರಣ ಸಂಚಿಕೆಯನ್ನು ಸ್ಟ್ಯಾನಿ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ಸ್ಟ್ಯಾನಿ ಫೆರ್ನಾಂಡಿಸ್ ಮಾತನಾಡಿ ಕ್ರೈಸ್ತರು ಹುಟ್ಟಿನಿಂದಲೇ ಸಮಾಜಸೇವಾ ಚಿಂತಕರು. ಸೇವಾ ಉತ್ಥಾನದಲ್ಲಿ ತಮ್ಮದೇ ವೈಶಿಷ್ಟ ್ಯತೆ ತೋರುತ್ತಾ ಬಂದವರು. ಸೇವೆಯನ್ನೇ ದಾರಿದೀಪವಾಗಿ ಸಮಾಜವನ್ನು ಮುನ್ನಡೆಸಿದ ಮನೋಧರ್ಮ ನಮ್ಮ ಪೂರ್ವಜರಲ್ಲಿ ಕಾಣಬಹುದು. ಆದುದರಿಂದ ನಾವೂ ಕೂಡಾ ಸಂಕುಚಿತ ಭಾವನೆಗಳಿಂದ ಮುಕ್ತರಾಗಿ ಮುನ್ನಡೆಯುತ್ತಾ ಭವಿಷ್ಯತ್ತಿನ ಪೀಳಿಗೆಗೆ ಭದ್ರವಾದ ಸಮಾಜ ನಿರ್ಮಿಸಲು ಬದ್ಧರಾಗಬೇಕು ಎಂದರು. ಗೌರವ ಕಾರ್ಯದರ್ಶಿ ರಿಚಾರ್ಡ್ ಡಿ’ಸೋಜಾ ಸ್ವಾಗತಿಸಿ ಸಂಭ್ರಮಗಳು ಏಕತೆ ಸಾರುವ ಉದ್ದೇಶವಾಗಿವೆ. ಇದಕ್ಕೆ ನಿದರ್ಶನವೇ ಇಲ್ಲಿನ 73ನೇ ವಾರ್ಷಿಕೋತ್ಸವ ಸಂಭ್ರಮ. ನಿರಂತರ ಏಳುವರೆ ದಶಕಗಳಿಂದ ಹಬ್ಬ ಸಂಭ್ರಮಿಸಿ ಏಕತೆಯನ್ನು ಸಾರುತ್ತಿರುವುದು ಅಭಿನಂದನೀಯ. ಪ್ರಾತಸ್ಮರಣೀಯರು ತಮ್ಮ ಸೇವೆಯನ್ನು ನಿರಂತರವಾಗಿಸುವ ಉದ್ದೇಶದಿಂದ ಒಗ್ಗೂಡಿದ್ದರು. ಅವರ ಮನೋದೃಷ್ಠಿಯನ್ನು ಮೈಗೂಡಿ ಚಿಂತನಾಧರ್ಮದ ಹಾದಿಯಲ್ಲಿ ನಾವೂ ಮುನ್ನಡೆಯಬೇಕು. ಆವಾಗಲೇ ಅವರ ಮತ್ತು ನಮ್ಮ ಉದ್ದೇಶಗಳು ಪರಿಪೂರ್ಣ ಗೊಳ್ಳುವುದು. ಏಕೀಭಾವ ಬೆಳೆದಾಗಲೇ ಸಮಾಜದ ಉನ್ನತಿ ಸಾಧ್ಯ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂಭ್ರಮವನ್ನೂ ಆಚರಿಸಿದ್ದು, ಅಸೋಸಿಯೇಶನ್‍ನ ಅಧ್ಯಕ್ಷ ಆ್ಯಂಟನಿ ಡಿ’ಸೋಜಾ, ಉಪಾಧ್ಯಕ್ಷ ಪ್ರಸಾದ್ ನಜ್ರೇತ್, ಗೌರವ ಕೋಶಾಧಿಕಾರಿ ಮೈಕಲ್ ಲೋಬೊ, ಜೊತೆ ಕಾರ್ಯದರ್ಶಿ ಆ್ಯಂಟನಿ ನಜ್ರೇತ್, ಜೊತೆ ಕೋಶಾಧಿಕಾರಿ ಸುನೀಲ್ ತಾವ್ರೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೋಮಾಸ್ ಡಿ’ಸೋಜಾ, ಮೈಕಲ್ ಲೋಬೊ, ಐವನ್ ಫೆರ್ನಾಂಡಿಸ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ರಾಯನ್ ಕ್ಯಾಸ್ತೆಲಿನೊ ಕಾರ್ಯಕ್ರಮ ನಿರ್ವಾಹಿಸಿದರು.

By suddi9

Leave a Reply

Your email address will not be published. Required fields are marked *