ಬಜಪೆ: ತನ್ನನ್ನು ಬಿಟ್ಟುಹೋದನೆಂದು ಆರೋಪಿಸಿ ಬಸ್ ಕ್ಲೀನರೋರ್ವ ಮತ್ತೊಬ್ಬನ ಜೊತೆಗೂಡಿ ಡ್ರೈವರ್ಗೆ ಹಲ್ಲೆ ನಡೆಸಿ ಬಸ್ಗೆ ಕಲ್ಲುತೂರಾಟ ನಡೆಸಿದ ಘಟನೆ ಬಸ್ ಜಂಕ್ಷನ್ ಬಳಿ ಇತ್ತೀಚೆಗೆ ನಡೆದಿದೆ. ಬಸ್ ಕ್ಲೀನರ್ ಯೋಗೀಶ್ ಪ್ರಕರಣ ಆರೋಪಿ.
ಘಟನೆಯ ವಿವರ: ಮೊಹಮ್ಮದ್ ಎಂಬವರು ಖಾಸಗಿ ಬಸ್ ಒಂದರ ಚಾಲಕರಾಗಿದ್ದು, ಬೆಂಗಳೂರಿಗೆ ತೆರಳಲೆಂದು ತನ್ನ ಬಸ್ಸನ್ನು ಕಿನ್ನಿಗೋಳಿಯಲ್ಲಿ ನಿಲ್ಲಿಸಿದ್ದರು. ಬಸ್ ಕ್ಲೀನರ್ ಯೋಗೀಶ್ ಸಮಯಕ್ಕೆ ಸರಿಯಾಗಿ ಕರ್ತವ್ಯಕೆಕ ಬಾರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮೊಹಮ್ಮದ್ ತನ್ನ ಬಸ್ಸನ್ನು ಕಿನ್ನಿಗೋಳಿಯಿಂದ ಬೆಂಗಳೂರು ಕಡೆಗೆ ಚಲಾಯಿಸಿದ್ದರು.
ಬಸ್ ಬಜ್ಪೆ ಜಂಕ್ಷನ್ ಬಳಿ ಬರುತ್ತಿರುವುದನ್ನು ಗಮನಿಸಿದ ಆರೋಪಿ ಯೋಗೀಶ್ ಬೈಕ್ನಲ್ಲಿ ಮತ್ತೊಬ್ಬ ಆರೋಪಿಯ ಜೊತೆಗೂಡಿ ಬಜ್ಪೆ ಜಂಕ್ಷನ್ ಬಳಿ ಬಸ್ಸನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ಗೆ ಕಲ್ಲು ತೂರಿದ್ದಲ್ಲದೆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಲ್ಲೇಟಿನಿಂದ ಬಸ್ನ ಗಾಜಿಗೆ ಹಾನಿ ಸಂಭವಿಸಿದೆ. ಆ ಬಳಿಕ ಡ್ರೈವರ್ಗೆ, `ನೀನು ಈಗ ಹೋಗು, ಮಾಣಿಗೆ ಬರುತ್ತೀಯಲ್ಲಾ ಆಗ ನಿನ್ನನ್ನು ಜೀವಂತ ಬಿಡುವುದಿಲ್ಲ’ ಎಂದು ಜೀವಬೆದರಿಕೆಯೊಡ್ಡಿರುವುದ್ದಾನೆ ಎಂದು ಈ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
