ಬಂಟ್ವಾಳ: ವಾಮದಪದವು ಸಮೀಪದ ಕೆರೆಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ನ.30ರಂದು ಸಂಭವಿಸಿದ್ದು ಗುರುವಾರವಷ್ಟೆ ಬೆಳಕಿಗೆ ಬಂದಿದೆ.
ಇಲ್ಲಿನ ಪೆಜಕ್ಕಳದ ದಿ.ತಿಮ್ಮಪ್ಪ ಅವರ ಪುತ್ರ ಕೂಲಿ ಕಾರ್ಮಿಕ ಉಮಾನಾಥ ಯಾನೆ ಓಬಯ(30) ಮೃತಪಟ್ಟವರು.ಅವರು ತಾಯಿ,ಸಹೋದರ,ಸಹೋದರಿಯನ್ನು ಅಗಲಿದ್ದಾರೆ.
ನ.30 ರಂದು ರಾತ್ರಿ ಮಳೆ ಬಂದಿದ್ದು ಉಮಾನಾಥ ಅವರು ಮನೆಗೆ ತೆರಳುತ್ತಿದ್ದ ವೇಳೆ ದಾರಿಬದಿ ಇದ್ದ ಕೆರೆಗೆ ಕಾಲುಜಾರಿ ಬಿದ್ದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.ಮನೆಗೆ ಬಾರದಿರುವ ಬಗ್ಗೆ ಮನೆಮಂದಿ ಹುಡುಕಾಡಿದ್ದು ಗುರುವಾರ ಬೆಳಗ್ಗೆ ಕೆರೆಯಲ್ಲಿ ಮೃತದೇಹ ಕಂಡುಬಂದಿತ್ತು . ಮೃತರ ಅಣ್ಣ ಶೇಖರ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
