ಬಜಪೆ:ಮುಜಾರಾಯಿ ಸಚಿವ ಮನೋಹರ್ ತಹಸೀಲ್ದಾರ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಳದ ನಡವಳಿಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕ್ಷೇತ್ರದ ವತಿಯಿಂದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಸಚಿವರನ್ನು ಗೌರವಿಸಿದರು.ಅರ್ಚಕರಾದ ವಾಸುದೇವ ಆಸ್ರಣ್ಣ , ಅನಂತಪದ್ಮಾನಾಭ ಆಸ್ರಣ್ಣ , ಹರಿನಾರಾಯಣ ದಾಸ ಆಸ್ರಣ್ಣ, ರಾಜ್ಯ ಧಾರ್ಮಿಕಪರಿಷತ್ ಸದಸ್ಯ ಪದ್ಮಾನಾಭ ವಿ.ಕೋಟ್ಯಾನ್, ಶ್ರೀ ಕ್ಷೇತ್ರ ಪೆರಾರದ ಆಡಳಿತ ಮಂಡಳಿಯ ಅಧ್ಯಕ್ಷ ಸುಧೀರ್ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸೋಧ್ಯಮ ಇಲಾಖೆಗೆ ಮನವರಿಕೆ ಮಾಡಿ ಕಟೀಲು ಹಾಗೂ ಪ್ರಮುಖ ಕೇಂದ್ರ್ರಗಳನ್ನು ಸಂಪರ್ಕಿಸುವ ಸಲುವಾಗಿ ಸರಕಾರಿ ಬಸ್ಸುಗಳನ್ನು ಮಂಜೂರುಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ದೇವಳದ ಆದಯವನ್ನು ಕ್ಷೇತ್ರದ ಮೂಲಸೌಖರ್ಯ ಅಭಿವೃದ್ಧಿಗೆ ಬಳಸುವ ನಿಟ್ಟಿನಲ್ಲಿ ನಿಯಮ ತಿದ್ದುಪಡಿಗೆ ಪ್ರಯತ್ನಿಸಲಾಗುವುದು. ದೇವಳದಲ್ಲಿರುವ ಗುತ್ತಿಗೆ ಆದಾರದ ನೌಕರರ ಖಾಯಾಮಾತಿ ಹಾಗೂ ವೇತನ ಹೆಚ್ಚಳ ಕುರಿತು ಪರಿಶೀಲಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಟೀಲು ದೇವಳದ ಗುತ್ತಿಗೆ ಆದಾರದ ಸಿಭಂದಿಗಳು ಖಾಯಾಮಾತಿ ಹಾಗೂ ವೇತನ ಹೆಚ್ಚಿಸುವಂತೆ , ಗಿಡಿಗೆರೆ ಬ್ರಹ್ಮ ಮುಗೇರಾ ದೈವಸ್ಥಾನದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಕ್ಷೇತ್ರದ ಆಡಳಿತ ಸಮಿತಿಯವರು ಸಚಿವರಿಗೆ ಮನವಿ ಸಲ್ಲಿಸಿದರು.
