ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.26ಗುರುವಾರ ಬೆಳಗ್ಗೆಯಿಂಂದ ಶುಕ್ರವಾರ ಬೆಳಗ್ಗೆವರೆಗೆ ನಡೆಯಿತು. ಭಜನಾ ಕಾರ್ಯಕ್ರಮಕ್ಕೆ ಪ್ರಧಾನ ಅರ್ಚಕ ಪವಿತ್ರಪಾಣಿ ಮಾಧವ್ ಭಟ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ನಾರಯಣ್ ಭಟ್ , ಪರಮೇಶ್ವರ್ ಭಟ್, ರಾಮ್ ಭಟ್ , ದೇವಳದ ಆಡಳಿತ ಮೊಕ್ತೇಸರರು ಡಾ ಮಂಜಯ್ಯ ಶೆಟ್ಟಿ ಅಮ್ಮಂಜೆ ಗುತ್ತು, ಮೊಕ್ತೆಸರರಾದ ತಾರನಾಥ ಆಳ್ವ ಮತ್ತು ಚೇರ ಸೂರ್ಯನಾರಾಯಣ ರಾವ್ ಉಪಸ್ಥಿತರಿದ್ದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ,ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಚ್ಚಂದ್ರ, ಮತ್ತಿತರರು ಉಪಸ್ಥಿತರಿದ್ದರು. ನಂತರ ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನಾ ಪ್ರಾರಂಭಗೊಂಡಿತು.





