ಕೈಕಂಬ:ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ ಯು. ಎಸ್. ಎ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಂತರ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳಜ್ಯೋತಿ ಸಮಗ್ರ ಶಾಲೆಯ ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಯೋಜನ ವಲಯಕ್ಕೆ ಒಳ ಪಟ್ಟ ಎಲ್ಲಾ ಅಂಗನವಾಡಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಬ್ಬ ಮತ್ತು ಕಲಿಕಾ ಸಲಕರೆಣೆಗಳನ್ನು ವಿತರಿಸಲಾಯಿತು.

25 vp makkala habba 1

25 vp makkala habba

DSC03991

DSC03993

DSC03997

DSC04000

ಕಾರ್ಯಕ್ರಮವನ್ನು ತಿರುವೈಲು ವಾರ್ಡ್ ನ ಕಾರ್ಪೊರೇಟರ್  ಹೇಮಲತಾ ರಘು ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯಕತೆಯಿದ್ದು ಇದಕ್ಕೆ ಪೂರಕವಾದಂತಹ ವಾತವರಣವನ್ನು ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ ಯು. ಎಸ್. ಎ ಸಂಸ್ಥೆಯು ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು.

ಅಂಗನವಾಡಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದ ಉಳಾಬೆಟ್ಟು, ಗ್ರಾಮ ಪಂಚಾಯತ್ನ ಅಧ್ಯಕ್ಷರಾದ  ವಸಂತ್ ರವರು ಮಾತಾನಾಡುತ್ತಾ ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳಾಗ ಬೇಕಾದರೆ ಈ ಮಕ್ಕಳಿಗೆ ಸರಿಯಾದ ಸಂಸ್ಕಾರಗಳನ್ನು ಕಲಿಸಿ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸುವಂತಹ ಕೆಲಸ ನಮ್ಮಿಂದಾಗ ಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ  ಗಣೇಶ್ ಭಟ್ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೀರ್ಮಾರ್ಗ, ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಕಸ್ತೂರಿ, ಮಂಗಳ ಜ್ಯೋತಿ ಸಮಗ್ರ ಶಾಲೆಯ ಪ್ರೌಢ ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಆಶೋಕ್ ಕುಮಾರ್ ಶೆಟ್ಟಿ, ಐ. ಟಿ. ಐ. ಪ್ರಾಂಶುಪಾಲರಾದ ಶ್ರೀ ನರೇಂದ್ರ, ಅಂಗನವಾಡಿ ಮೇಲ್ವಿಚಾರಕಿ  ಉಷಾ ಉಪಸ್ಥಿತರಿದ್ದರು.

ಅಂಗನವಾಡಿ ಮಕ್ಕಳಿಗೆ ಛದ್ಮವೇಷ, ಅಭಿನಯಗೀತೆ, ಕಥೆ ಹೇಳುವುದು ಚೆಂಡು ವರ್ಗಾಹಿಸುವುದು ಮತ್ತು ಚಿತ್ರಕಲೆ, ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು
.
ಈ ಕಾರ್ಯಕ್ರಮದಲ್ಲಿ ಯೋಜನಾ ವಲಯಕ್ಕೆ ಒಳಪಟ್ಟ ಒಟ್ಟು 25 ಅಂಗನವಾಡಿಯ 195 ಮಕ್ಕಳು ಪೋಷಕರು ಭಾಗವಹಿಸಿದ್ದರು.

ಮಂಗಳ ಜ್ಯೋತಿ ಚೈಲ್ಡ್ ಪಂಡ್ ನ್ಯಾಷನಲ್ ಯು. ಎಸ್. ಎ. ಯೋಜನಾಧಿಕಾರಿಗಳಾದ  ಪುನೀತ್ ಡಿ. ಪ್ರಸ್ತಾವಿಸಿ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕಿ  ಭಾರತಿ ವಂದಿಸಿದರು. ಮಮತ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *