ಬಜ್ಪೆ: ಹೆಂಡತಿ-ಮಗುವನ್ನು ತವರಿಂದ ಗಂಡನಮನೆಗೆ ಕರೆತಂದು ನಾಮಕರಣ ಶಾಸ್ತ್ರಕ್ಕೆ ಇನ್ನೇನು ಎರಡೇ ದಿನ ಇರಬೇಕೆನ್ನುವಷ್ಟರಲ್ಲಿ ವ್ಯಕ್ತಿಯೋರ್ವರು ತನ್ನ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆಯ ವೇಳೆಗೆ ಬೆಳಕಿಗೆ ಬಂದಿದೆ.
ಈ ರೀತಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಳಲಿ ಬಾಕಿಮಾರು ನಿವಾಸಿ ಶ್ರೀಧರ(38) ಎಂದು ಗುರುತಿಸಲಾಗಿದೆ.
ತನ್ನ ಸಂಬಂಧಿಕರ ಮನೆಯಾದ ಕಡ್ಮಣ್ ಎಂಬಲ್ಲಿಗೆ ಆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ರೀದರ್ ಬಂದಿದ್ದರು. ಗಂಡ-ಹೆಂತಿ ಇಬ್ಬರೂ ಕೆಲಸಕ್ಕೆ ಹೋಗಿದ್ದು ಈ ಪೈಕಿ ಮಕ್ಕಳೂ ಸಹ ಮನೆಯಲ್ಲಿರಲಿಲ್ಲ. ಮನೆಯೊಡತಿ ಸಂಜೆ ಬಂದು ಬಾಗಿಲು ತೆರೆದು ಅಡಿಗೆ ಕೋಣೆಗೆ ಬಂದು ನೋಡಿದಾಗ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇವರಿಗೆ ಕಳೆದ ವರ್ಷ ಪುತ್ತೂರಿನ ಯುವತಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈಕೆ ಗಭರ್ಾವತಿಯಾಗಿ ತವರಿಗೆ ತೆರಳಿದ್ದು ಹೆಂಡತಿ ಮಗುವಿನೊಂದಿಗೆ ಗಂಡನ ಮನೆಗೆ ಬರುವ ತವಕದಲ್ಲಿದ್ದರು. ಆದರೆ ಹೆಂಡತಿ ಮನೆಗೆ ಬರುವ ಮುನ್ನವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರ ಶೋಖಾಚರಣೆಗೆ ಕಾರಣವಾಗಿದೆ.
ಇವರು ಕಳೆದ ವರ್ಷ ತನ್ನ ಇಬ್ಬರು ತಂಗಿಯಂದಿರಿಗೆ ಮದುವೆ ಮಾಡಿಕೊಟ್ಟಿದ್ದರು. ಅಲ್ಲದೆ ಇವರ ಸೋದರಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಸಾಲಬಾಧೆಯೇ ಕಾರಣವಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
