cow dead

ಸುದ್ದಿ9 ಕಿನ್ನಿಗೋಳಿ ;ಕಿನ್ನಿಗೋಳಿಯಲ್ಲಿ ಸೋಮವಾರ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಸುರಿದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶ ಭಂಡರ್ಕರ್ ಎಂಬವರ ಕೊಟ್ಟಿಗೆ ಸಮೀಪ ಸಿಡಿಲು ಬಡಿದು ದನವೊಂದು ಮೃತಪಟ್ಟಿದೆ. ಮನೆಯ ಹತ್ತಿರದ ಹಲಸಿನ ಮರ ಸಂಪೂರ್ಣ ಸೀಳಿಹೋಗಿದ್ದು ಕೊಟ್ಟಿಗೆ ಹಾನಿಯಾಗಿದೆ. ಗಣೇಶ ಭಂಡರ್ಕರ್ ದನವನ್ನು ಕೊಟ್ಟಿಗೆಗೆ ಕರೆದೊಯ್ಯುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

cow dead
cow dead

ಮೃತ ಜಾನುವಾರುವಿನ ಮೌಲ್ಯ ಸುಮಾರು 20,000 ರೂ. ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಮತ್ತು ಪಂಚಾಯಿತಿ ಸದಸ್ಯರಾದ ಕೇಶವ ಕಕರ್ೆರ, ಸುನೀಲ್ ಸಿಕ್ವೇರಾ ಮತ್ತು ಗುರುರಾಜ್ ಮಲ್ಲಿಗೆಯಂಗಡಿ ಭೇಟಿ ನೀಡಿದರು

By suddi9

Leave a Reply

Your email address will not be published. Required fields are marked *