ಮೂಡುಬಿದರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಡ ಶಾಲೆಯಲ್ಲಿ ಕನ್ನಡ ಸಾಹಿತ್ಯ ಮಕ್ಕಳ ಸಮ್ಮೇಳನಕ್ಕೆ ಮುದ್ದಣ ಮಂಟಪದ ರತ್ಮಕರವರ್ಣ ವೇದಿಕೆಯಲ್ಲಿ ಉದ್ಘಾಟಿಸಲಾಯಿತು. ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಡ ಶಾಲೆಯ ಮುಖ್ಯಶಿಕ್ಷಕ ಶಂಕರನಾರಯಾಣ ರಾವ್ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಕನ್ನಡ ಸುಸಂಸ್ಕ್ರತ ಭಾಷೆ ಸುಂದರವಾದ ಲಿಪಿ ಅದರೆ ಅಂಗ್ಲ ಮಾಧ್ಯಮದ ಹೊಡೆತದಿಂದ ಇಂದು ಕನ್ನಡ ಭಾಷೆ ನೇಪಥ್ಯಕ್ಕೆ ಸೇರುವ ಅಪಾಯವಿದೆ.ವ್ಯವಹಾರಿಕವಾಗಿ ಅಂಗ್ಲ ಭಾಷೆ ಇರಲಿ ಅದರೊಟ್ಟಿಗೆ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
mbd_nov19_4

ಮಕ್ಕಳ ಸಾಹಿತ್ಯ ಸಮೇಳನದ ಅಧ್ಯಕ್ಷತೆಯನ್ನು ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಡ ಶಾಲೆಯ ಹತ್ತನೇ ತರಗತಿಯ ವಿದ್ಯಾಥರ್ಿ ಪ್ರವೀಣ್ ಬಿಜಾಪುರ ವಹಿಸಿ ಮಾತನಾಡಿ ಸಾಹಿತ್ಯ ಸಮ್ಮೇಳನದಿಂದ ನಮಗೆ ಸಾಹಿತ್ಯದ ಅಭಿರುಚಿ ಮೂಡಿಸಲು ಸಾಧ್ಯ.ಇದರಿಂದ ಸಾಹಿತ್ಯದ ಪರಿಚಯವಾಗುತ್ತದೆ,ಕನ್ನಡ ಭಾಷೆ ನಮ್ಮದು ಎಂಬ ಅಭಿಮಾನ ಮೂಡಿಸಲು ನಾವು ಕತೆ ಕವನ ಸಾಹಿತಿ ಪುಸ್ತಕಗಳನ್ನು ಓದಿ ರಚಿಸುವ ಕೆಲಸ ನಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡಿನ ಭಾಷೆ, ನೆಲ, ಜಲವನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗೋಣವೆಂದರು.

ಸಮಾರಂಭದಲ್ಲಿ ಶಾಲೆಯ ಪ್ರತಿಭಾವಂತ ಹಳೆ ವಿದ್ಯಾರ್ಥಿನಿಗಳಾದ ಪ್ರಶಾಂತಿ ಶೆಟ್ಟಿ ಹಾಗು ಅಕ್ಷತ ಅಂಚನ್ ನವರನ್ನು ಸನ್ಮಾನಿಸಲಾಯಿತು.
ಇದೇ ವೇದಿಕೆಯಲ್ಲಿ ನಡೆದ ಪ್ರಬಂಧ ಗೋಷ್ಟಿ ಕಾರ್ಯಕ್ರಮದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಅದರ ಶ್ರೇಷ್ಠತೆಯ ಬಗ್ಗೆ ಅನಿಲ್ರವರು ಪ್ರಬಂಧ ಮಂಡಿಸಿದರು. ಪ್ರಾಚೀನ ಕನ್ನಡನಾಡಿನ ಶ್ರೇಷ್ಠತೆ ಬಗ್ಗೆ ಪ್ರಣೀತ್ ಶೆಟ್ಟಿ ಮಂಡಿಸಿದರೆ,ಹೊಸಗನ್ನಡದಲ್ಲಿ ಸಾಹಿತ್ಯದ ಶ್ರೇಷ್ಠತೆಯ ಪ್ರಬಂಧವನ್ನು ಅಕ್ಷಯಕುಮಾರ್ ಮಂಡಿಸಿದರು.

ಮಧ್ಯಾಹ್ನ ನಡೆದ ಕವಿಗೊಷ್ಟಿಯಲ್ಲಿ ನಮೃತ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದು ಶಹನಾಝ,ವೆಂಕಟೇಶ್,ಶಮಿತ ಸೂರಜ್ ಧನ್ಯ ತಮ್ಮ ಸ್ವರಚಿತೆ ಕವಿತಗಳನ್ನು ವಾಚಿಸಿದರು.ನಂತರ ಕನ್ನಡ ನಾಡು ನುಡಿಯ ಬಗ್ಗೆ ಶುಭಕರ,ಶಮಿತ ಸುಹಾಸಿನಿ ಶಹನಾಝ ಸೂರಜ್, ಸುಕೇಶ್ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಸಿದರು. ಶಾಲೆಯ ಕನ್ನಡ ಶಿಕ್ಷಕಿ ಗಾಯತ್ರಿ ಸಚ್ಚಿದಾನಂದ ಉಡುಪರು ಸಮ್ಮೇಳನ ಸಂಯೋಜಿಸಿದರು. ಶಾಲಾ ಶಿಕ್ಷಕರರಾದ ದಿನಕರ ಕುಂಭಾಸಿ, ಸದಾಶಿವ ಉಪಾಧ್ಯಾಯ,ಸುಧಾಕರ.ಪಿ, ಸೌಮ್ಯ, ಲತಾ, ವಿದ್ಯಾರ್ಥಿ ನಾಯಕ ಅಕ್ಷಯ ಕುಮಾರ್, ಉಪನಾಯಕಿ ಶಮಿತಾ ಆಂಚನ್ ಉಪಸ್ಥಿತರಿದ್ದರು. ಮಹಾಂತೇಶ್ ಕಾರ್ಯಕ್ರಮವನ್ನು ನಿರೂಪಿಸಿ ಅಕ್ಷಯ ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ಗಾಯನ, ಸಾಂಸ್ಕ್ರತಿಕ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ಮೆರವಣಿಗೆ ನಡೆಯಿತು.

By suddi9

Leave a Reply

Your email address will not be published. Required fields are marked *