ಮೂಡುಬಿದರೆ: ಕರ್ನಾಟಕ ಪಪೂ ಶಿಕ್ಷಣ ಇಲಾಖೆ ಹಾಗೂ ಯಾನೆಪೋಯಿ ಪಪೂ ಕಾಲೇಜು ಮಂಗಳೂರು ಇವುಗಳ ಸಹಯೋಗದಲ್ಲಿ ತೋಡಾರಿನ ಯಾನಪೋಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನ ನಡೆಯುವ ರಾಜ್ಯಮಟ್ಟದ ಪಪೂ ವಿದ್ಯಾರ್ಥಿಗಳ ನೆಟ್ಬಾಲ್ ಚಾಂಪ್ಯಾನ್ಶಿಪ್ ಗೆ ಗುರುವಾರ ಚಾಲನೆ ನೀಡಲಾಯಿತು.
ಅಂತಾರಾಷ್ಟ್ರೀಯ  ನೆಟ್ಬಾಲ್ ಕ್ರೀಡಾಪಟು ಅಶ್ವಲ್ ರೈ ಪಂದ್ಯಾಟವನ್ನು ಉದ್ಘಾಟಿಸಿದರು.
mbd_nov19_1

mbd_nov19_1(a)
ಯೆನೆಪೋಯ ಸಮೂಹ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕ್ರೀಡೆ ಎನ್ನುವುದು ಕೇವಲ ಆಟಕ್ಕೆ ಸೀಮಿತವಲ್ಲ. ಕ್ರೀಡೆಯಿಂದ ಕ್ರೀಡಾಪಟು ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗುತ್ತಾನೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಾಧಕರಾಗಿ ಮೂಡಿಬರಬೇಕು ಎಂದರು.

ಸಂಸ್ಥೆಯ  ಹಳೆ ವಿದ್ಯಾ , ಅಂತಾರಾಷ್ಟ್ರೀಯ  ಕ್ರೀಡಾಪಟು ಮುಹಮ್ಮದ್ ಸನ್ಸಿ ಅವರನ್ನು ಸನ್ಮಾನಿಸಲಾಯಿತು. ಪಪೂ ಶಿಕ್ಷಣ ಇಲಾಖೆ ಮಂಗಳೂರು ಇದರ ಉಪನಿರ್ದೇಶಕ ಕೆ.ಆರ್ ತಿಮ್ಮಯ, ರಾಜ್ಯ ಪಪೂ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಕ್ರೀಡಾ ಸಂಯೋಜಕ ಶಶಿಧರ ಮಾಣಿ, ವೈ.ಐ.ಟಿಯ ದೈಹಿಕ ಶಿಕ್ಷಕ ಲೋಕೇಶ್, ದೈಹಿಕ ಶಿಕ್ಷಕರಾದ ಚೇತನ್, ಪ್ರೇಮನಾಥ ಶೆಟ್ಟಿ, ನವೀನ್ ಮತ್ತಿತರರು ಇದ್ದರು. ವೈ ಐ ಟಿಯ  ಪ್ರಾಚಾರ್ಯ  ಸಂದೀಪ್ ಜೆ, ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿಯರಾದ ಸುರೇಖ ಹಾಗೂ ವಾಣಿ ನಿರೂಪಿಸಿದರು. ಆಡಳಿತಾಧಿಕಾರಿ ಡಾ.ವಿವೇಕಾನಂದ ವರ್ಣಾಕರ್ ವಂದಿಸಿದರು.

* ರಾಜ್ಯಮಟ್ಟದ ನೆಟ್ಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. * ಅಂತಾರಾಷ್ಟ್ರೀಯ  ಕ್ರೀಡಾಪಟು ಮುಹಮ್ಮದ್ ಸನ್ಸಿ ಅವರನ್ನು ಸನ್ಮಾನಿಸಲಾಯಿತು.

 

By suddi9

Leave a Reply

Your email address will not be published. Required fields are marked *