Published On: Thu, Jul 3rd, 2025

ಪುತ್ತೂರು: ಇಂಜಿನಿಯರಿಂಗ್ ನಲ್ಲಿ ಮೊದಲ ರ‍್ಯಾಂಕ್‌ ನ ಜೊತೆಗೆ ಚಿನ್ನದ ಪದಕ ಪಡೆದ ಸುಚಿತಾ ಮಡಿವಾಳ.

ಪುತ್ತೂರು: ಇಂಜಿನಿಯರಿಂಗ್ ನಲ್ಲಿ ಮೊದಲ ರ‍್ಯಾಂಕ್‌ ನ ಜೊತೆಗೆ ಚಿನ್ನದ ಪದಕ ಪಡೆದ ಕು. ಸುಚಿತಾ ಮಡಿವಾಳ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಡಾಟಾ ಸೈನ್ಸ್ ನ ಪ್ರಥಮ ಬ್ಯಾಚ್ ಗೇ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ನ ಜೊತೆಗೆ ಚಿನ್ನದ ಪದಕ ಪಡೆದಿದ್ದಾರೆ.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ನಡೆಸಿದ 2024-25 ನೇ ಸಾಲಿನ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ ಬಿಇ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದಲ್ಲಿ 9.60 cgpa ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಪಡೆದಿರುತ್ತಾರೆ.

ದಿ.ರಮೇಶ ಮಡಿವಾಳ ಹಾಗೂ ಮೋಹಿನಿಯವರ ಮಗಳಾದ ಇವರು ಗ್ರಾಮೀಣ ಪ್ರದೇಶದಿಂದ ಬಂದವರಾದರೂ ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಅಣ್ಣನ ಸಹಾಯ, ತಾಯಿಯ ಪ್ರೋತ್ಸಾಹದಿಂದ ಇಂತಹ ಸಾಧನೆ ಮಾಡಿರೋದು ಹೆಮ್ಮೆಯ ವಿಚಾರವಾಗಿದೆ.

ಪ್ರತೀ ಹಂತದ ಮಾಸಿಕ, ವಾರ್ಷಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಾ ಬರುತ್ತಿದ್ದ ಸುಚಿತಾ ಅಂತಿಮ ವರ್ಷದ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿರುವುದು ಪ್ರಾಧ್ಯಾಪಕರಿಗೂ ಜೊತೆಗೆ ಹೆತ್ತವರಿಗೂ ಸಂತಸವನ್ನು ಉಂಟು ಮಾಡಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ .ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ನಿರ್ದೇಶಕರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಪ್ರಸನ್ನ ಕೆ ಅವರ ಮುಂದಾಳತ್ವದಲ್ಲಿ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ರೂಪ ಜಿಕೆ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಇವರನ್ನು ಅಭಿನಂದಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter