ಪಿ.ಜಿ.ಸಿ.ಇ.ಟಿ ಪರೀಕ್ಷೆಯಲ್ಲಿ ಶಪುನ್ ಪೂಂಜ ರಾಜ್ಯಕ್ಕೆ ಒಂಬತ್ತನೇ ರ‍್ಯಾಂಕ್
ಬಂಟ್ವಾಳ: ಇಲ್ಲಿನ ಎಸ್. .ವಿ. ಎಸ್ ಕಾಲೇಜಿನ ವಿದ್ಯಾರ್ಥಿ ಶಪುನ್ ಪೂಂಜ, ಎಂ.ಸಿ.ಎ ಪದವಿ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿ.ಜಿ. ಸಿ.ಇ.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ನೇ ಸ್ಥಾನ ಪಡೆದಿರುತ್ತಾರೆ.
ವರ್ಷಂಪ್ರತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ನಂತರದ ಎಮ್ ಟೆಕ್, ಎಮ್ ಸಿ ಎ ಮುಂತಾದ ಉನ್ನತ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ, ಪಿಜಿ ಸಿ.ಇ.ಟಿ ಆಯೋಜಿಸುತ್ತದೆ.
ಅದೇ ರೀತಿ ಈ ವರ್ಷವೂ ಪರೀಕ್ಷೆ ಆಯೋಜಿಸಿದ್ದು, ಸಾವಿರಾರು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಬಡಗಬೆಳ್ಳೂರು ಗ್ರಾಮದ ಅತಿಕಾರಹಿತ್ಲು ಸೀತಾರಾಮ ಸಂಪ ಪೂಂಜಾ ಅವರ ಮೊಮ್ಮಗ ಶಪುನ್ ಪೂಂಜ ಅವರು ಈ ಬಾರಿ ಟಾಪ್ 1೦ ರ್ಯಾಂಕ್ ನಲ್ಲಿ 9 ಸ್ಥಾನ ಪಡೆದು ಬಂಟ್ವಾಳ ತಾಲೂಕಿಗೆ ಹೆಸರು ತಂದಿದ್ದಾರೆ.ಇವರು ಬಂಟ್ವಾಳ ತಾ ಬಡಗಬೆಳ್ಳೂರಿನ ಅತಿಕಾರಹಿತ್ಲು ಶ್ರೀಮತಿ ಸುಮ ಸುರೇಶ್ ಪೂಂಜರ ಪುತ್ರರಾಗಿದ್ದಾರೆ.