ವಿದ್ಯಾರ್ಥಿ ವೇತನಕ್ಕೆ ಅರ್ಜಿಆಹ್ವಾನ
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಬೊಳ್ಳಾಯಿ ಸಜೀಪಮೂಡ ಇದರ ಮಹಾಸಭೆಯು ಸೆ. ೮ ೯ರಂದು ಆದಿತ್ಯವಾರ ಬೆಳಗ್ಗೆ ೧೦.೩೦ ಕ್ಕೆ ಶ್ರಿ ಗುರು ಕಲ್ಯಾಣ ಮಂಟಪ ಸುಭಾಷ್‌ನಗರ ದಲ್ಲಿ ಜರಗಲಿರುವುದು. ಮಹಾಸಭೆಯಂದು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಆದ್ದರಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ.೮೦ ಅಂಕ ಹಾಗೂ ಅದಕ್ಕಿಂತ ಮೇಲ್ಪಟ್ಟು ವಿದ್ಯಾಭ್ಯಾಸ ನಡೆಸುತ್ತಿರುವ ಶೇ.೭೦ ಅಂಕ ಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿವೇತನದ ಅರ್ಜಿಗಳನ್ನು ಬೊಳ್ಳಾಯಿ ಕೇಂದ್ರ ಕಛೇರಿ ಅಥವಾ ಸಂಘದ ಯಾವುದೇ ಶಾಖೆಗಳಲ್ಲಿ ಪಡೆಯ ಬಹುದು. ಭರ್ತಿ ಮಾಡಿದ ಅರ್ಜಿಯನ್ನು ಆ.೨೫ರ ಒಳಗಾಗಿ ಕೇಂದ್ರ ಕಛೇರಿ ಅಥವಾ ಶಾಖೆಗಳಿಗೆ ತಲುಪಿಸ ಬೇಕು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸೆ. ೮ರಂದು ನಡೆಯುವ ಮಹಾಸಭೆಯಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಲಾಗುವುದು. ಎಂದು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.