ಬಜ್ಪೆ: ಗುರುಪುರದಲ್ಲಿ ಕಳೆದ ವರ್ಷ ಅಳವಡಿಸಿದ್ದ ಹಂಪ್ಸ್‍ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದು ಅದರಲ್ಲಿ ಆಳವಾದ ಗುಂಡಿ ಬಿದ್ದಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಹಂಪ್ದ್‍ಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಖಂಡಿತ.
ಗುರುಪುರದಲ್ಲಿ ಕಳೆದ ಈಚರ್ ಲಾರಿಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಗುರುಪುರವನ್ನು ಬಂದ್ ಮಾಡಿ ರಸ್ತೆ ಅಗಲೀಕರಣಗೊಳಿಸಬೇಕು, ಇಲ್ಲವಾದಲ್ಲಿ ಹಂಪ್ಸ್ ನಿರ್ಮಿಸಬೇಕೆಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕಾಗಮಿಸಿದ್ದ ತಹಶೀಲ್ದಾರ್ ಇದಕ್ಕೆ ಒಪ್ಪಿಕೊಂಡು ಅದಾದ ಒಂದು ವಾರದ ಬಳಿಕ ಕೈಕಂಬದಿಂದ ಗುರುಪುರ ತನಕ ಸರಣಿ ಹಂಪ್ಸ್‍ಗಳನ್ನು ಅಳವಡಿಸಲಾಗಿತ್ತು.

ಅವೈಜ್ನಾನಿಕ ಹಂಪ್ಸ್‍ಗಳು:
ಗುರುಪುರದಲ್ಲಿ ಅಳವಡಿಸಿದ್ದ ಹಂಪ್ಸ್‍ಗಳು ಅವೈಜ್ಞಾನಿಕವಾಗಿದೆ ಎಂದು ವಾಹನಸ ವಾರರು ಆಗಾಗ ದೂರಿಕೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಹಂಪ್ಸ್ ಇದೆ ಎಂದು ಗುರುತಿಸಲೆಂದು ಇದಕ್ಕೆ ಪಟ್ಟಿ ಅಳವಡಿಸಲಾಗಿಲ್ಲ. ಅಕ್ಕಪಕ್ಕದಲ್ಲೇ ಹಲವು ಹಂಪ್ಸ್‍ಗಳಿರುವುದರಿಂದ ಚಾಲಕರಿಗೆ ಗೊಂದಲ ಉಂಟ1ಆಗುತ್ತದೆ. ಇದರಿಂದಾಗಿ ಕಳೆದ ವರ್ಷದಿಂದ ಇದುವರೆಗೆ ಹಲವಾರು ಅಪಘಾತ ನಡೆದಿದೆ.
ಕೆಲವು ವಾಹನ ಚಾಲಕರಿಗೆ ಹಂಪ್ಸ್ ಕಾಣದಿರುವುದರಿಂದ ಅಪಘಾತ ಸಂಭವಿಸಿದರೆ ಕೆಲವರು ಹಂಪ್ಸ್ ಸಮೀಪ ಗೊಂದಲ ಉಂಟಾಗಿ ಎದುರಿನ ವಾಹಕ್ಕೆ ಡಿಕ್ಕಿ ಹೊಡೆಯುತ್ತಾರೆ. ಈ ರೀತಿ ಹಲವರು ಬಾರಿ ಸಂಭವಿಸಿದ್ದು, ಅನೇಕ ಗಂಭೀರ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ಎಚ್ಚರಿಸಲಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಗೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ.
ಗುರುಪುರದಲ್ಲಿ ಕಳೆದ ವರ್ಷ ಸಂಭವಿಸಿದ ಸಾವುನೋವಿಗೆ ಲೆಕ್ಕವಿಲ್ಲ. ಟ್ಯಾಂಕರ್ ಡಿಕ್ಕಿ ಹೊಡೆದು ಇಬ್ಬರು, ಲಾರಿ ಬೈಕ್‍ಗೆ ಡಿಕ್ಕಿ ಹೊಡೆದು ಮೂವರು, ಈಚರ್‍ಗೆ ಡಿಕ್ಕಿ ಹೊಡೆದು ಬಾಲಕ ಹೀಗೆ ಹಲವು ಗಂಭೀರ ಪ್ರಕರಣಗಳು ಗುರುಪುರಲದಲ್ಲಿ ನಡೆದಿದೆ. ಅಲ್ಲದೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳೂ ಇದಕ್ಕಿಂ ಜಾಸ್ತಿ ನಡೆದಿದ್ದು, ಹಂಪ್ಸ್ ಅಳವಡಿಸಿದ ಬಳಿಕ ಇದರ ಪ್ರಮಾಣ ಇನ್ನಷ್ಟು ಜಾಸ್ತೊಯಾಗಿದೆ.
ಬಾಕ್ಸ್
ಹಂಪ್ಸ್‍ನಲ್ಲಿ ಮರಣ ಗುಂಡಿಗಳು!
ಇಂದು ಆ ಹಂಪ್ಸ್‍ಗಳು ಯಾವ ಸ್ಥಿತಿಗೆ ತಲುಪಿದೆ ಎಂದರೆ ಅವುಗಳು ಸಂಪೂರ್ಣ ಕೆಟ್ಟುಹೋಗಿದ್ದು, ಅವುಗಳಲ್ಲಿ ಗುಂಡಿಬಿದ್ದಿದೆ. ಕಾರ್, ಜೀಪಿ, ಬೈಕ್‍ನಂಥಾ ವಾಹನಗಳು ಅದರಲ್ಲಿ ಸಂಚರಿಸುವ ಹಾಗಿಲ್ಲ. ಆದ್ದರಿಂದ ಇಲ್ಲಿ ಅಪಘಾತ ನಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ.
ಆದರೆ ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಇದು ಆಡಳಿತ ವರ್ಗದವರ ಕಣ್ಣಿಗೆ ಬಿದ್ದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಈ ಹಂಪ್ಸನ್ನು ತಕ್ಷಣ ರಿಪೇರಿಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವ ಅಗತ್ಯವಿದೆ. ಹಂಪ್ಸ್‍ಗೆ ಪಟ್ಟಿ ನಿರ್ಮಿಸಿ, ಅದು ರಾತ್ರಿಯ ಹೊತ್ತೂ ಕಾಣುವಂಣತೆ ಮಾಡುವ ಅಗತ್ಯವಿದೆ. ಇಲ್ಲದೇ ಹೋದರೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ಸಂಭವಿಸುವ ಸಾಧ್ಯತೆ ಇದೆ.


