ಮುಂಬಯಿ: ಮಹಾರಾಶ್ಟ್ರ ನವ ನಿರ್ಮಾಣ ಸೇನೆ ಪಕ್ಷದ ವರಿಷ್ಠ ನೇತಾರ ರಾಜ್ ಠಾಕ್ರೆ ಅವರಿಗೆ ಮಹಾನಗರದಲ್ಲಿನ ಯುವ ಉದ್ಯಮಿ, ಅಂಧೇರಿ ಪೂರ್ವದ ಶೆಟ್ಟಿ ಎಂಡ್ ನಾಯ್ಕ್ ಅಸೋಸಿಯೇ ಟ್ಸ್ನ ಪಾಲುದಾರ, ಸಿಎ| ಜಗದೀಶ್ ಬಿ.ಶೆಟ್ಟಿ ದೀಪಾವಳಿ ಹಬ್ಬದ ಶುಭಾಶಯಗಳನ್ನಿತ್ತರು.
ಇಂದಿಲ್ಲಿ ಗುರುವಾರ ಮಧ್ಯಾಹ್ನ ಲಕ್ಷ್ಮೀ ಪೂಜೆಯ ಶುಭಾವಸರದಲ್ಲಿ ಮನಸೆ ಮಹಿಳಾ ಉಪಾಧ್ಯಕ್ಷೆ ರೀತಾ ಗುಪ್ತ ಅವರನ್ನೊಳಗೊಂಡು ದಾದರ್ ಶಿವಾಜಿಪಾರ್ಕ್ ಅಲ್ಲಿನ ಕೃಷ್ಣಕುಂಜ್ ನಿವಾಸಕ್ಕೆ ತೆರಳಿದ ಜಗದೀಶ್ ಬಿ.ಶೆಟ್ಟಿ ರಾಜ್ ಠಾಕ್ರೆ ಮತ್ತು ಶರ್ಮಿಳಾ ಠಾಕ್ರೆ ಅವರಿಗೆ ಅಭಿನಂದಸಿ ಶುಭಾರೈಸಿದರು.

