ಏಕತೆಯಿಂದಲೇ ಸಾರ್ಥಕತೆ ಸಾಧ್ಯ : ಫಾ| ವಲೇರಿಯನ್ ಮೆಂಡೋನ್ಸಾ
ಮುಂಬಯಿ : ಬಾರ್ಕೂರು ತೀರಾ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಹುಟ್ಟಿಬೆಳೆದು ವಿದ್ಯಾವಂತರಾಗಿ ಬದುಕು ರೂಪಿಸಿದ ನೀವು ಕರ್ಮಭೂಮಿಯಲ್ಲೂ ಸಂಘಟಿತರಾಗಿ ಬಾಳುತ್ತಿರುವುದೇ ದೊಡ್ಡ ಸಾಧನೆಯಾಗಿದೆ. ಹಳೆ ನೆನಪುಗಳು ಮರೆಯಾಗದೇ ಇದ್ದಲ್ಲಿ ಹಳೆಯದ್ದೂ ಹೊಸ ರೂಪ ಪಡೆಯಲು ಸಾಧ್ಯ ಎನ್ನುವುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಗಿದೆ. ನಿಮ್ಮಲ್ಲಿನ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ನಿಮ್ಮ ಶ್ರೀಮಂತಿಕೆಯಾಗಿದೆ. ನಿಮ್ಮೆಲ್ಲರ ಸಹಯೋಗದಿಂದಲೇ ನಮ್ಮ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಸಂಸ್ಥೆಯಾಗಿ ಬೆಳೆಯುತ್ತಿದೆ. ತವರೂರ ಅಭಿವೃದ್ಧಿಯೇ ನಾಡಿನ ಜನತೆಯ ಸಮೃದ್ಧಿ ಆಗಿದೆ. ನಿಮ್ಮಂತವರ ಏಕತೆಯಿಂದಲೇ ಸಾರ್ಥಕತೆ ಸಾಧ್ಯ ಎಂದು ಸೈಂಟ್ ಪೀಟರ್ಸ್ ಚರ್ಚ್ ಬಾರ್ಕೂರು ಇದರ ಪ್ರಧಾನ ಧರ್ಮಗುರು ರೆ| ಫಾ| ವಲೇರಿಯನ್ ಮೆಂಡೋನ್ಸಾ ತಿಳಿಸಿದರು.

ಬೃಹನ್ಮುಯಿಯಲ್ಲಿ ಎರಡುವರೆ ದಶಕಗಳಿಗೂ ಅಧಿಕ ಸುದೀರ್ಘಾವಧಿಯ ಸಾಮಾಜಿಕ-ಶೈಕ್ಶಣಿಕ ಸೇವೆಗೈದು ಪ್ರತಿಷ್ಠಿತ ಸಂಸ್ಥೆಯೆಂದೆಣಿಸಿದ ಸೈಂಟ್ ಪೀಟರ್ಸ್ ಅಸೋಸಿಯೇಶನ್ (ಬಾರ್ಕೂರು) ಮುಂಬಯಿ ಸಂಸ್ಥೆಯು ತನ್ನ 27ನೇ ವಾರ್ಷಿಕ ಸಮಾರಂಭ ಇಂದಿಲ್ಲಿ ಬುಧವಾರ ಪೂರ್ವಾಹ್ನ ವಿಲೇಪಾರ್ಲೆ ಪಶ್ಚಿಮದ ಭಾೈದಾಸ್ ಸಭಾಗೃಹದಲ್ಲಿ ನಡೆಸಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸದ್ಭಕ್ತರನ್ನು ಅನುಗ್ರಹಿಸಿ ಫಾ| ಮೆಂಡೋನ್ಸಾ ಮಾತನಾಡಿದರು.
St.Peters Claud Nite-64

Claud Nite @ St. Peter's Assn-A1

Claud Nite @ St. Peter's Assn-B3

Claud Nite @ St. Peter's Assn-B4

Claud Nite @ St. Peter's Assn-B5

St.Peters Claud Nite-1

St.Peters Claud Nite-3

St.Peters Claud Nite-4

St.Peters Claud Nite-5

St.Peters Claud Nite-6

St.Peters Claud Nite-7

St.Peters Claud Nite-8

St.Peters Claud Nite-9

St.Peters Claud Nite-10

St.Peters Claud Nite-11

St.Peters Claud Nite-12

St.Peters Claud Nite-13

St.Peters Claud Nite-14

St.Peters Claud Nite-15

St.Peters Claud Nite-16

St.Peters Claud Nite-23

St.Peters Claud Nite-24

St.Peters Claud Nite-34

St.Peters Claud Nite-41

St.Peters Claud Nite-42

St.Peters Claud Nite-47ಗೌರವ ಅತಿಥಿಗಳಾಗಿ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲು ್ಯ. ಡಿ’ಸೋಜಾ, ಮಾಜಿ ಉಪಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಉದ್ಯಮಿಗಳಾದ ರೋನಿ ಗೋವಿಯಸ್, ಫ್ರಾನ್ಸಿಸ್ ರಸ್ಕೀನ್ಹಾ, ಹ್ಯಾರಿ ರೆಬೆಲ್ಲೋ ಉಪಸ್ಥಿತರಿದ್ದರು.

ಆಲ್ಬರ್ಟ್ ಡಬ್ಲ್ಯು.ಡಿ’ಸೋಜಾ ಮಾತನಾಡಿ ಮೋಡೆಲ್ ಬ್ಯಾಂಕ್ ನಮ್ಮನಿಮ್ಮೆಲ್ಲರ ಬ್ಯಾಂಕ್ ಆಗಬೇಕು ಏಕೆಂದರೆ ಇದು ಪುರ್ವಜರು ನಮಗೆ ನೀಡಿದ ವರವಾಗಿದೆ. ಸ್ಥಾಪಕರಲ್ಲಿ ಭವಿಷ್ಯತ್ತಿನ ಜನಾಂಗದ ಹಣಕಾಸು ವ್ಯವಸ್ಥೆಯ ದೂರದೃಷ್ಠಿಯಿತ್ತು. ಇದನ್ನು ನಾವೂ ಮುನ್ನಡೆಸಿದಾಗ ಅವರ ಕನಸು ನನಸಾಗುವುದು. ತಮ್ಮೆಲ್ಲರ ಸಹಯೋಗ ದೊರೆತಲ್ಲಿ ಶೀಘ್ರದಲ್ಲೇ ಮಲ್ಟಿಸ್ಟೇಟ್ ಬ್ಯಾಂಕ್ ಆಗಿಸುವೆವು ಎಂದರು.

ಮೋಡೆಲ್ ಬ್ಯಾಂಕ್‍ನ ನಿರ್ದೇಶಕರುಗಳಾದ ನ್ಯಾ| ಪಿಯುಸ್ ವಾಸ್, ಶ್ರೀಮತಿ ಬೆನೆಡಿಕ್ಟಾ ರೆಬೆಲ್ಲೋ, ಲಾಝರಸ್ ಮಿನೇಜಸ್. ತೋಮಸ್ ಡಿ.ಲೋಬೊ, ಉದ್ಯಮಿ ಹ್ಯಾರಿ ಬುಥೆಲ್ಲೋ ಕಲಾಶ್ರೀ ಕ್ಲೋಡ್ ಡಿ’ಸೋಜಾ ಮುಂತಾದ ಗಣ್ಯರು ವಿಶೇಷ ಅತಿಥಿüಗಳಾಗಿ ಉಪಸ್ಥಿತರಿದ್ದು ಅಸೋಸಿಯೇಶನ್‍ನ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಕಾರ್ಯಕ್ರಮದ ಅಂಗವಾಗಿ ಮೊಡೇಲ್ ಬ್ಯಾಂಕ್ ತನ್ನ ಶತಮಾನೋತ್ಸವದ ಸಲುವಾಗಿ ಧರ್ಮಾರ್ಥವಾಗಿ `ಕ್ಲೋಡ್ ನಾಯ್ಟ್’ ಪ್ರಾಯೋಜಿಸಿದ್ದು, ಕೊಂಕಣ್ ಕಲಾಶ್ರೀ ಬಿರುದಾಂಕಿತ ಕ್ಲೋಡ್ ಡಿ’ಸೋಜಾ ಮಂಗಳೂರು ತಂಡವು ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ಸಾದರ ಪಡಿಸಿತು. ಕ್ಲೆಮೆಂಟ್ ಲೊಬೋ ಸಾರಥ್ಯದ ಕೊಂಕಣಿ ಕಲಾಮಂಚ್ ಸಂಯೋಜಕತ್ವದ ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರಾದ ಐವಾನ್ ಸಿಕ್ವೇರಾ, ಅನಿತಾ ಡಿ’ಸೋಜಾ, ಆಶ್ವ್ವಿನ್ ಡಿ’ಕೋಸ್ಟಾ ಮತ್ತು ಜೋತ್ಸಾ ್ನ ಮನಾಕರ್ಷಕ ಗಾನಸುಧೆಯ ಇಂಪು ನೀಡಿದರು. ಪ್ರಸಿದ್ಧ ಸಂಗೀತ ನಿರ್ದೇಶಕ ಜೋಸ್ವ್ವಿನ್ ಪಿಂಟೋ ತಂಡವು ಸಂಗೀತ ನೀಡಿದರು. ಡೊಲ್ಲಾ ನಂದಿಗುಡ್ಡ, ಜೋಸೆಫ್ ಪಿಂಟೋ, ಆಲ್ವಿನ್ ವೇಗಸ್ ಮತ್ತು ಫೆಲಿಕ್ಸ್ ಡಿ’ಸೋಜಾ ಮತ್ತು ಅನಿಲ್ ಸಲ್ಡನ್ಹಾ ಬಳಗ ಹಾಸ್ಯ ಪ್ರಹಸನ ಪ್ರಸ್ತುತ ಪಡಿಸಿದರು. ಥಂಡರ್‍ಗೈಯ್ಸ್ ತಂಡವು ನೃತ್ಯಾವಳಿಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳನ್ನು ರಂಜಿಸಿತು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ನೊರ್ಬರ್ಟ್ ಮಿನೇಜಸ್ ಮತ್ತು ತಿಮೋಥಿü ಡಿ’ಸೋಜಾ, ಕೋಶಾಧಿಕಾರಿ ಜೋನ್ ಗೊನ್ಸಾಲ್ವಿಸ್, ಜೊತೆ ಕಾರ್ಯದರ್ಶಿ ಅರ್ಥರ್ ಮೆಂಡೋನ್ಸಾ, ಜನಸಂಪರ್ಕಾಧಿಕಾರಿ ಜೋಲ್ವಿನ್ ಫುರ್ಟಾಡೋ, ಮಾಜಿ ಅಧ್ಯಕ್ಷರುಗಳಾದ ಫೆಲಿಕ್ಸ್ ಬಾನ್ರ್ಸ್, ರಿಚಾರ್ಡ್ ಕರ್ವಾಲ್ಲೋ, ಸೈಮನ್ ಪೀಟರ್ ಪುರ್ಟಾಡೊ, ಗ್ಲಾಡಿಸ್ ಸಿಂಪೆÇ್ಲೀನ್ ಸಿಕ್ವೇರಾ, ವಿಲ್ಮಾ ಬಿ.ಸಿಕ್ವೇರಾ, ಬೆನ್ನಿ ಎಫ್.ಬಾನ್ರ್ಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು,ಮೇರಿನೊಲ್ ಹಿರಿಯ ಪ್ರಾಥಮಿಕ ಶಾಲೆ ಬಾರ್ಕೂರು ಇದರ ಅಮೃತೋತ್ಸವದ ಸವಿನೆನಪಿಗಾಗಿ ಅಸೋಸಿಯೇಶನ್ ಪರವಾಗಿ ಪದಾಧಿಕಾರಿಗಳು ಧನಸಹಾಯ ಚೆಕ್‍ನ್ನು ಶಾಲಾ ಸಂಚಾಲಕ ಫಾ| ವಲೇರಿಯನ್ ಮೆಂಡೋನ್ಸಾ ಅವರಿಗೆ ಹಸ್ತಾಂತರಿಸಿ ಅಭಿನಂದಿಸಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಎರಿಕ್ ಕರ್ವಾಲೋ ಸಂಸ್ಥೆಯ ಕಾರ್ಯವೈಖರಿ ಭಿತ್ತರಿಸಿದರು. ಯೋಜನಾ ಸಂಘಟಕ ಐವಾನ್ ರೆಬೆಲ್ಲೋ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಜೊಯ್‍ಲನ್ ಫೆರ್ನಾಂಡಿಸ್ ಅಭಾರ ಮನ್ನಿಸಿದರು.

By suddi9

Leave a Reply

Your email address will not be published. Required fields are marked *