ಬಂಟ್ವಾಳ: ನಕಲಿ ಪಾಸ್ಪೋರ್ಟ್ ತಯಾರಿಸಿಕೊಡುತ್ತಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಬಂಟ್ವಾಳ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಿ.ಸಿ.ರೋಡಿನ ಪರ್ಲಿಯಾ ನಿವಾಸಿ ಮುಬಿನ್ ಇಸ್ಮಾಯಿಲ್ ಬಂಧಿತ ಮಹಿಳೆಯಾಗಿದ್ದಾಳೆ.
download
ಬೋಳ್ಯಾರಿನ ಅಬೂಬಕ್ಕರ್ ಎಂಬಾತನಿಗೆ ನಕಲಿ ಪಾಸ್ಪೋರ್ಟ್ ಮಾಡಿಸಿ ಕೊಡಲು ಸಿದ್ದತೆ ನಡೆಸಿದ್ದು ಪಾಸ್ಪೋರ್ಟ್ ವಿಚಾರಣೆಗಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಅಬೂಬಕ್ಕರ್ ಅವರು ದಾಖಲೆಗಳೊಂದಿಗೆಗೆ ಬಂದಿದ್ದಾಗ ಈ ವಿಚಾರ ಬೆಳಿಕಿಗೆ ಬಂದಿದೆ. ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ ಸುಳ್ಳು ಮಾಹಿತಿ ಇರುವುದು ಗೊತ್ತಾಗಿದ್ದು ಅಬೂಬಕ್ಕರ್ನನ್ನು ಈ ಬಗ್ಗೆ ಪೊಲೀಸರು ತೀವ್ರ ವಿಚಾರಣೆಗೆ ಗುರಿ ಪಡಿಸಿದಾಗ ಮುಬೀನ್ ಇಸ್ಮಾಯಿಲ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ. ತಕ್ಷಣ ಪೊಲೀಸರು ಕಾರ್ಯಚರಣೆ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.

By suddi9

Leave a Reply

Your email address will not be published. Required fields are marked *