ಬಜಪೆ :ಬಹುಭಾಷಾ ಚಿತ್ರ ನಟ ಅರ್ಜುನ್ ಶರ್ಜಾ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಗುರುವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಜುನ್ ಶರ್ಜಾ ಅವರ ಜತೆ ಪತ್ನಿ ನಿವೇದಿತಾ ( ಆಶಾರಾಣಿ) ಮಗಳು ಐಶ್ವರ್ಯ,ಅತ್ತೆ ಗೀತಾ ಮತ್ತಿತರರು ಉಪಸ್ಥಿತರಿದ್ದರು.
  arjunsharja kateel devalkfke bheti

NSK_9054
ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಶ್ರಣ್ಣ ಅವರು ಶ್ರೀ ದೇವಿಯ ಶೇಷ ವಸ್ತ್ರ ಹಾಗೂ ಪ್ರಸಾದ ವಿತರಿಸಿ ಗೌರವಿಸಿದರು. ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಉಪಸ್ಥಿತರಿದ್ದರು. ಈ ಸಂದರ್ಭ ಅರ್ಜುನ್ ಶರ್ಜಾ ಸುದ್ದಿಗಾರರ ಜತೆ ಮಾತನಾಡಿ ಮಗಳು ಐಶ್ವರ್ಯಗಾಗಿ ವಿನೂತನ ಚಿತ್ರವೊಂದನ್ನು ತಯಾರಿಸಲಾಗುತ್ತಿದ್ದು ನಾನೇ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಆಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ನಾನು ನಟಿಸಿರುವ ಗೇಮ್ ಚಿತ್ರದ ಯಶಸ್ವಿಗಾಗಿ ಹಾಗೂ ಮುಂದೆ ನಿರ್ಮಾಣಗೊಳ್ಳಲಿರುವ ಮಗಳು ಐಶ್ವರ್ಯ ನಟಿಸುವ ಚಿತ್ರದ ಯಶಸ್ವಿಗಾಗಿ ವೀಶೇಷವಾಗಿ ಪ್ರಾರ್ಥನೆ ಸಲಿಸುವ ಸಲುವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಹಾಗೂ ಕಟೀಲು ಕ್ಷೇತ್ರಗಳಿಗೆ ಭೇಟಿ ನೀಡಿರುತ್ತೇವೆ ಎಂದು ತಿಳಿಸಿದರು.
ಅವಕಾಶ ಸಿಕ್ಕಿದಲ್ಲಿ ತುಳು ಚಲನಚಿತ್ರದಲ್ಲಿಯು ನಟಿಸಲು ನಾನು ಸಿದ್ದ ಎಂದು ಹೇಳಿದ ಅರ್ಜುನ್ ಶರ್ಜಾ ಇತ್ತೀಚಿನ ತುಳು ಚಿತ್ರಗಳ ಯಶಸ್ವಿನ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.

By suddi9

Leave a Reply

Your email address will not be published. Required fields are marked *