ಮುಂಬಯಿ, ನ.02: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಮಾಜಿ ಸಕ್ರೀಯ ಕಾರ್ಯಕರ್ತೆ , ದಿ| ವೈ.ನಾಗೇಶ್ ಅವರ ಧರ್ಮಪತ್ನಿ ಜಾನಕಿ ನಾಗೇಶ್ ಕರ್ಕೇರ (73.) ಅವರು ಕಳೆದ ಭಾನುವಾರ ತಡರಾತ್ರಿ ವಾಶಿ ಹಿರಾನಂದನಿಯ ಪೋಟರ್ಿಸ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಸದ್ಯ ನವಿಮುಂಬಯಿ ಸಾನ್ಪಾಡ ಅಲ್ಲಿನ ಶಾಂತಿ ನಿಕೇತನ್ ಹೌಸಿಂಗ್ ಸೊಸೈಟಿಯ ಬಾಲಾಜಿ ಟವರ್ಸ್ ನಲ್ಲಿ ತನ್ನ ಕಿರಿಯ ಸುಪುತ್ರನ ನಿವಾಸದಲ್ಲಿ ವಾಸವಾಗಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಟಪಾಡಿ ಎಣಗುಡ್ಡೆ ಒಂದನೇ ಗುರಿಕಾರ ಮೂಲದವರಾಗಿ ಮುಂಬಯಿ ಮಹಾನಗರದಲ್ಲಿ ವೈ.ನಾಗೇಶ್ ಎಂದೇ ಪರಿಚಿತ, ಸುಮಾರು ಆರು ದಶಕಗಳಗಳಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿಯಲ್ಲಿ ಸಕ್ರೀಯರಾಗಿ ಅನೇಕ ಹುದ್ದೆಗಳೊಂದಿಗೆ ಸೇವೆ ಸಲ್ಲಿಸಿ, ಭಾರತ್ ಬ್ಯಾಂಕ್ನ ನಿರ್ದೇಶಕರಾಗಿದ್ದ ವೈ.ನಾಗೇಶ್ ಅವರ ಧರ್ಮಪತ್ನಿಯಾಗಿ ಪ್ರಫುಲ್ಚಂದ್ರ, ಸಂದೀಪ್ (ಎರಡು ಗಂಡು), ಸರಿತಾ (ಒಂದು ಹೆಣ್ಣು) ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಉಡುಪಿ ಹಳೆಯಂಗಡಿ ಮೂಲತಃ ಜಾನಕಿ ಕರ್ಕೇರ ನಿಧನಕ್ಕೆ ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ಧನ ಪೂಜಾರಿ, ಸಚಿವ ವಿನಯಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾ ಲ ಜಿ.ಅಂಚನ್, ಪದಾಧಿಕಾರಿಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ| ಯು. ಧನಂಜಯ ಕುಮಾರ್,ಕೆ. ಗಂಗಾಧರ ಪೂಜಾರಿ , ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವ ವಿಭಾಗಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್ ಸೇರಿದಂತೆ ನೂರಾರು ಸದಸ್ಯರು, ಭಾರತ್ ಬ್ಯಾಂಕ್ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ನಿಕಟಪೂರ್ವ ಕಾರ್ಯಧ್ಯಕ್ಷ ವಿ.ಆರ್ ಕೋಟ್ಯಾನ್, ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಸಿ.ಟಿ ಸಾಲ್ಯಾನ್, ಅಶೋಕ್ ಎಂ.ಕೋಟ್ಯಾನ್, ಡಾ| ಸುನೀತಾ ಎಂ.ಶೆಟ್ಟಿ, ಚಲನಚಿತ್ರ ನಿರ್ಮಾಪಕ ರಾಜಶೇಖರ್ ಕೋಟ್ಯಾನ್, ಉದ್ಯಮಿಗಳಾದ ಸುರೇಂದ್ರ ಎ.ಪೂಜಾರಿ, ಹರೀಶ್ ಜಿ.ಅಮೀನ್, ತೋನ್ಸೆ ಸಂಜೀವ ಪೂಜಾರಿ, ಶ್ರೀನಿವಾಸ ಕರ್ಕೇರ ಸೇರಿದಂತೆ ಮಹಾನಗರದಲ್ಲಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಪೂರ್ವಾಹ್ನ ಸನ್ಪಾಡ ಅಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಿದ್ದು, ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

