ಮುಂಬಯಿ, ನ.02: ಕೊಲ್ಕತ್ತದ ಬಿಷ್ಣುಪುರ್ ಫೋಟೋಗ್ರಫಿ ಕ್ಲಬ್ ಏರ್ಪಡಿಸಿದ `ಬೆಸ್ಟ್ ಬಿಪಿಸಿ ಇಂಟರ್ನ್ಯಾಷನಲ್ ಡಿಜಿಟಲ್ ಸಲೋನ್-2015′ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ `ಫೋಟೋಜರ್ನಲಿಸಂ’ ವಿಭಾಗದಲ್ಲಿ ವಿಜಯವಾಣಿ ಮಂಗಳೂರು ಆವೃತ್ತಿಯ ಛಾಯಾಗ್ರಾಹಕ ಅಪುಲ್ ಆಳ್ವ ಇರಾ ಅವರ `ಸೇವ್ಡ್ ಕ್ಲಚಸ್ ಆಫ್ ಡೆತ್’ ಚಿತ್ರ `ಬಿಪಿಸಿ ಚೇರ್ಮನ್ ಚಾಯಿಸ್ ಅವಾರ್ಡ್ ಪಡೆದಿದೆ. ಇದೇ ವಿಭಾಗದಲ್ಲಿ `ಸ್ಮೋಕಿ ಡೆತ್ ವ್ಯಾಲಿ’ ಚಿತ್ರ `ಸರ್ಟಿಫಿಕೇಟ್ ಆಫ್ ಮೆರಿಟ್’ ಪ್ರಶಸ್ತಿ ಪಡೆದಿದೆ.

