ಬಂಟ್ವಾಳ:ತಾಲ್ಲೂಕಿನ ತುಂಬೆ ನೀರಾ ಘಟಕ ಸ್ಥಗಿತಗೊಂಡಿರುವ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಘಟಕ ಮತ್ತೆ ಪುನರಾರಂಭಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಡಳತಕ್ಕೆ ಪತ್ರ ಮೂಲಕ ಆಗ್ರಹಿಸಿದೆ.
ಕೇರಳ ರಾಜ್ಯದ ಕಂಪನಿಯೊಂದಕ್ಕೆ ಸಹಕಾರಿ ತತ್ವದಡಿ ಘಟಕದ ನಿರ್ವಹಣೆ ನೀಡಲಾಗಿದ್ದು, ಇದೀಗ ದಿಡೀರನೆ ಘಟಕ ಸ್ಥಗಿತಗೊಂಡಿರುವ ಔಚಿತ್ಯವೇನು..? ಎಂದು ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಇವರು ಪ್ರಶ್ನಿಸಿದ್ದಾರೆ.
ನೀರಾ ಘಟಕ ಕಾರ್ಯವೈಖರಿ ಮತ್ತು ಸ್ಥಗಿತಗೊಳಿಸುವ ನಿರ್ಧಾರ ಬಗ್ಗೆ ಜಿಲ್ಲಾಡಳಿತವು ಜಿಲ್ಲೆಯ ತೆಂಗು ಬೆಳೆಗಾರರರು ಮತ್ತು ತೆಂಗು ಬೆಳೆಗಾರರ ಸಹಕಾರಿ ಸಂಘಗಳಲ್ಲಿ ಯಾವುದೇ ರೀತಿಯ ಚರ್ಚೆ ಅಥವಾ ಸಮಾಲೋಚನೆ ನಡೆಸಿಲ್ಲ. ಎಂದು ಅವರು ಆರೋಪಿಸಿದ್ದಾರೆ. ಇದಕ್ಕಾಗಿ ಶೀಘ್ರವೇ ನೀರಾ ಘಟಕ ಪುನರಾರಂಭಿಸಿ ನೀರಾ ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ ಗ್ರಾಮೀಣ ಕೃಷಿಕರಿಗೆ ಉದ್ಯೋಗ ಕಲ್ಪಿಸುವಂತೆ ಹಸಿರುಸೇನೆ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *