ಮುಂಬಯಿ,  ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾನ್ಯ ಸಹಾಯ ಉಪ ಸಮಿತಿಯ ಆಶ್ರಯದಲ್ಲಿ ಆರೋಗ್ಯ ನಿಧಿಯ ಸಹಾಯಾರ್ಥವಾಗಿ ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಲಕುಮಿ ತಂಡ ಮಂಗಳೂರು ಇದರ ಕುಸಲ್ದ ಕಲಾವಿದರು ಲ| ಕಿಶೋರ್ ಡಿ.ಶೆಟ್ಟಿ ನಿರ್ದೇಶನದಲ್ಲಿ `ಬದ್ಕೆರೆಗಾದ್ ಸೈಪಿನಕುಲು’ ತುಳು ನಾಟಕ ಅಭಿನಯಿಸಿದರು.

Billawara Ass. Tulu Drama-B1

Billawara Ass. Tulu Drama-B2

Billawara Ass. Tulu Drama-A2

Billawara Ass. Tulu Drama-B3

Billawara Ass. Tulu Drama-1

Billawara Ass. Tulu Drama-2

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ ವಿ.ಆರ್ ಕೋಟ್ಯಾನ್, ಗೌರವ ಅತಿಥಿಯಾಗಿ ಭಾರತ್ ಬ್ಯಾಂಕ್ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ನ್ಯಾಯವಾದಿ ಸೋಮನಾಥ ಬಿ.ಅವಿೂನ್, ಸಾಮಾನ್ಯ ಸಹಾಯಕ ಉಪ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು ಗಂಗಾಧರ್ ಜೆ. ಪೂಜಾರಿ, ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು.

ಮನುಷ್ಯನಿಗೆ ದೇಹಾರೋಗ್ಯವಿದ್ದರೆ ಮಾತ್ರ ಸಕಲಭಾಗ್ಯ ಒಲಿಯುವುದು. ಬಹುತೇಕರ ನಿರ್ಲಕ್ಷತನವೇ ಅನಾರೋಗ್ಯಕ್ಕೆ ಮೂಲ ಕಾರಣ ಆಗುತ್ತದೆ. ಆದುದರಿಂದ ನಾವೆಲ್ಲರೂ ಪ್ರಕೃತಿಸೌಖ್ಯ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ಸ್ವಸ್ಥತೆಯ ಬದುಕಿಗಾಗಿ ಕಾಳಜಿ ವಹಿಸಬೇಕು. ಆರೋಗ್ಯಪಾಲನಾ ಕಾಯಕದಲ್ಲಿ ತೊಡಗಿಸುವ ಸಂಸ್ಥೆಗಳು ಸಮಾಜದ ಒಟ್ಟು ಆರೋಗ್ಯದಾಯಕ ಸ್ವಸ್ಥತೆ ಕಾಪಾಡುವಲ್ಲೂ ಶ್ರಮಿಸಬೇಕು ಎಂದು ವಿ.ಆರ್ ಕೋಟ್ಯಾನ್ ಸಲಹಿದರು.

ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ನುಡಿಗಳನ್ನಾಡಿ ವಿ.ಆರ್ ಕೋಟ್ಯಾನ್ ಅವರಲ್ಲಿನ ಆರೋಗ್ಯ ಕಾಳಜಿಯ ಅಪರಿಮಿತ ಆಸಕ್ತಿ ಸರ್ವರಿಗೂ ಮಾದರಿ ಆಗಬೇಕು. ದಾನಿಗಳಿಂದ ನಿರಂತರ ನಿಧಿ ಸಂಗ್ರಹಿಸಿ, ಪರಿಣತ ತಜ್ಞರನೇಕರ ನಿಕಟ ಸಂಪರ್ಕ, ಸಂಬಂಧ ಹೊಂದಿ ನೂರಾರು ಜನತೆಯ ದೇಹಾರೋಗ್ಯ ಕಾಪಾಡುವ ವಿಆರ್ಕೆ ಅವರ ತ್ಯಾಗಶೀಲ ಸೇವೆ ಅನುಪಮ. ಅವರೋರ್ವ ಆರೋಗ್ಯಪರ ದಣಿವರಿಯದ ಚೇತನ. ಇಂತಹವರ ಸೇವೆಯಲ್ಲಿ ನಾವೂ ಸಹಕರಿಸಿದ್ದಲ್ಲಿ ಆರೋಗ್ಯ ಸಂಪತ್ತನ್ನು ಸುಲಭವಾಗಿ ಕಾಯ್ದಿರಿಸ ಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರು ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ ಡಾ| ಯು. ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ರಾಜೇಶ್ ಜೆ.ಬಂಗೇರ, ಶಿವರಾಮ ಎಸ್.ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ, ಭಾರತ್ ಬ್ಯಾಂಕ್ನ ನಿರ್ದೆಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಹರೀಶ್ಚಂದ್ರ ಜಿ.ಮೂಲ್ಕಿ, ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್ ಮೊದಲಾದವರು ಉಪಸ್ಥಿತರಿದ್ದರು.

ಕು| ವಿಧಿತಾ ಎ.ಪೂಜಾರಿ ಪ್ರಾರ್ಥನೆಯೊಂದಿಗೆ  ಸಾಮಾನ್ಯ ಸಹಾಯ ಸಮಿತಿ ಕಾರ್ಯಧ್ಯಕ್ಷ ರಾಜಾ ವಿ.ಸಾಲ್ಯಾನ್ ಸ್ವಾಗತಿಸಿದರು. ಅಸೋಸಿಯೇಶನ್ನ ಗೌ| ಪ್ರ| ಕಾರ್ಯದರ್ಶಿ  ಧರ್ಮಪಾಲ್ ಜಿ.ಅಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯ ಸಮಿತಿ ಗೌ| ಕಾರ್ಯದರ್ಶಿ  ಗಣೇಶ್ ಕೆ.ಪೂಜಾರಿ ವಂದಿಸಿದರು.

ವರದಿ  ಚಿತ್ರ : ರೋನ್ಸ್ ಬಂಟ್ವಾಳ್

 

By suddi9

Leave a Reply

Your email address will not be published. Required fields are marked *