ಬಂಟ್ವಾಳ ; ಬ್ರಹ್ಮರ ಕೂಟ್ಲು ರಾಷ್ಟ್ರೀಯ ಹೆದ್ಧಾರಿಯ ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಶನಿವಾರ ಕಿಡಿಗೇಡಿಗಳ ಗುಂಪೋಂದು ಹಲ್ಲೆ ನಡೆಸಿದ್ದು  ಲಕ್ಷಾಂತರ ಮೌಲ್ಯದ ಸೊತ್ತು ಗಳನ್ನು ಹಾನಿಗೋಳಿಸಿ ನಗದು, ಚಿನ್ನ ದೋಚಿಸಿದ್ದಾರೆ .ಘಟನೆಯಲ್ಲಿ ಟೋಲ್ ಗೇಟ್ ನ ಸಿಬ್ಬಂದಗಳು ಹಲ್ಲೆಗಳಗಾಗಿದ್ದು ಟೋಲ್ಬೂತ್ , ಕಂಪ್ಯೂಟರ್, ಸಿಸಿ ಕ್ಯಾಮರ ಸಹಿತ ಲಕ್ಷಾಂತರ ಮವಲ್ಯದ ಸೊತ್ತುಗಳು ಹಾನಿಯಾಗಿವೆ.ಘಟನೆಗೆ ಸಂಬದಿಸಿ ಕೈಕಂಬ ಶಾಂತಿಯಂಗಡಿ ನಿವಾಸಿಗಳಾದ ಮಹಮ್ಮದ್ಶರೀಫ್, ಶಾಕೀರ್,ಸಲಾಂಅಜೀಜ್  ಮತ್ತಿತರರ ವಿರುದ್ದ ಬಂಟ್ವಾಳ ನಗರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ.ಶರಣಪ್ಪ ಭೇಟಿ ನೀಡಿದ್ದು ಪರಿಸೀಲನೆ ನಡೆಸಿದ್ದಾರೆ.ಬಂಟ್ವಾಳ ಡಿ ವೈಎಸ್ಪಿ ರಸ್ಮಿಪರಡಿ ಭೇಟಿ ನೀಡಿದ್ದು ಸಿ.ಸಿ ಟಿವಿಯ ಮೂಲಕ ಕಿಡಿಗೇಡಿಗಳು ನಡೆಸಿದ ದಾಂದಲೆಯನ್ನು ವೀಕ್ಷಿಸಿ ಮುಂದಿನಕ್ರಮ ಕೈಳ್ಳಲು  ಅಧಿಕಾರಿಗಳಿಗೆ  ಮಾರ್ಗದರ್ಶನ ಮಾಡಿದ್ದಾರೆ. ಸ್ಥಳಕ್ಕೆ ಡಿಸಿಐಬಿ ,ಕೆಎಸ್ ಆರ್ ಪಿ  ಸೇರಿದಂತೆಹೆಚ್ಚುವರಿ ಪೋಲಿಸರನ್ನು ನಿಯೋಜಿಸಲಾಗಿದೆ. ಪ್ರಕರಣದಲ್ಲಿ ಬಾಗಿಯಾಗಿರುವ  ಆರೋಪಿಗಳನ್ನು  ತಕ್ಷನ ಬಂದಿಸಲು ಆದೇಶ ನೀಡಿದ್ದಾರೆ . ಪೋಲಿಸ ವ್ರತ್ತ ನಿರೀಕ್ಷಕ ರಾಜಶೇಖರ ಮೇಸ್ತ್ರಿಯವರು ಘಟನಾ ಸ್ಥಳಕ್ಕೆ  ಬರುವಾಗಲೂ ಕಿಡಿಗೇಡಿಗಳು ದಸಾಂದಲೆ ನಡೆಸುತ್ತಿದ್ದರು ನಿಯಂತ್ರಿಸುವ ಪ್ರಯತ್ನ ಮಾಡದೆ  ಸ್ಥಳದಿಂದ ತೆರಳಿದ್ದರು ಎಂದು ಪ್ರತ್ಯಕ್ಷಧರಶಿಗಳು ಆರೋಪಿಸಿದ್ದಾರೆ.

ಟೋಲ್ ಗೇಟ್ ನ ಸಿಬ್ಬಂದಿಯಿಂದಲೇ ಮಾಹಿತಿ ;;  ಇಲ್ಲಿನ ಸಿಬ್ಬಂದಿಯೋರ್ವ ಕಿಡಿಗೇಡಿಗಳಿಗೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ . ಕಿಡಿಗೇಡಿಗಳೊಂದಗೆ ಗೆಳೆತನ ವೊಂದಿದ  ಈತ ದಾಂದಲೆಗೆ ಪ್ರೇರೇಪಣೆ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಕಿಡಿಗೇಡಿಗಳು ಹಲವು ಬಾರಿ ಹಲ್ಲೆ ನಡೆಸಿದಾಗಲು ಈತ ಸ್ಥಳದಲಿಯೇ ಇದ್ದರು ಇವರ ಬಗ್ಗೆ ಪ್ರತಿಕ್ರಯಿಸಿರಲಿಲ್ಲ ಎಂದು ವಿವರಿಸಿದ್ದಾರೆ.

tol getge dali
tol getge dali

 

6 (1)

7

8

 

9

By suddi9

Leave a Reply

Your email address will not be published. Required fields are marked *