ಬಜಪೆ: ಶ್ರೀ ಶಾರದಾ ಯಕ್ಷಗಾನ ಮಂಡಳಿ ಸೋಮನಾಥಧಾಮ ಪೆರ್ಮುದೆ ಇಲ್ಲಿನ ಮಂದಿರದಲ್ಲಿ ಶ್ರೀ ಶಾರದಾ ಮಾತೆಯ ನೂತನ ಬಿಂಬ ಪ್ರತಿಷ್ಠೆ ಸೋಮವಾರ ಧಾರ್ಮಿಕ ವಿಧಿಪೂರ್ವಕ ಜರಗಿತು.
ಎಡಪದವು ವೇದಮೂರ್ತಿ ರಾಧಾಕೃಷ್ಣ ತಂತ್ರಿ ಅವರು ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು.
19vm.Permude Sharade (1)

19vm.Permude Sharadeಸಪ್ತ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಮುಂತಾದ ಧಾರ್ಮಿಕ ವಿಧಿಗಳು ಜರಗಿದವು.
ಮಂಡಳಿಯ ಅಧ್ಯಕ್ಷ ಶೇಖರ ಶೆಟ್ಟಿ ಕಲ್ಪವೃಕ್ಷ ಹಾಗೂ ಕುಟುಂಬಿಕರು ಸೇವಾಕರ್ತರಾಗಿ ಸಹಕರಿಸಿದ್ದು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ, ಅಶೋಕ್ ಶೆಟ್ಟಿ ಕಲ್ಪವೃಕ್ಷ, ಪ್ರೇಮನಾಥ ಶೆಟ್ಟಿ ಕಲ್ಪವೃಕ್ಷ, ಗಿರೀಶ್ ಎಂ. ಶೆಟ್ಟಿ ಕಲ್ಪವೃಕ್ಷ, ಗುರುರಾಜ ಮಾಡ, ಮಂಡಳಿಯ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಯಾದವ ಕೋಟ್ಯಾನ್ ಕನ್ನಿಕಾ ನಿಲಯ, ಬಜಪೆ ವ್ಯವಸಾಯ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ದೀಪಕ್ ಪೆರ್ಮುದೆ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ರಂಜಿಸಿದ ಯಕ್ಷ-ಗಾನ-ಸಂಭ್ರಮ:
ಇದೇ ಸಂದರ್ಭ ಆಯೋಜಿಸಲಾದ ನಾಲ್ವರು ಭಾಗವತರ ಪಾಲ್ಗೊಳ್ಳುವಿಕೆಯ ಯಕ್ಷ-ಗಾನ-ಸಂಭ್ರಮ ಅತ್ಯತ್ತಮವಾಗಿ ಪ್ರೇಕ್ಷಕರ ಗಮನ ಸೆಳೆಯಿತು.
ಭಾಗವತ ಪದ್ಮಾಣ ಗಣಪತಿ ಭಟ್, ಸತ್ಯನಾರಾಯಣ ಪುಣಿಂಚಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಅವರುಗಳು ವಿಭಿನ್ನ ಸುತ್ತುಗಳಲ್ಲಿ ವಿಭಿನ್ನ ಹಾಡುಗಳ ಸುಶ್ರಾವ್ಯ ಪ್ರಸ್ತುತಿ ಗಮನ ಸೆಳೆಯಿತು. ಗುರುಪ್ರಸಾದ್ ಬೊಲಿಂಜಢ, ಗಣೇಶ್ ರಾವ್ ಅಡೂರು, ಚೈತನ್ಯ ಕೃಷ್ಣ ಪದ್ಯಾಣ, ವಿನಯ ಆಚಾರ್ಯ ಕಡಲು ಅವರು ಚೆಂಡೆ-ಮದ್ಧಳೆಯಲ್ಲಿ ಸಹಕರಿಸಿದರೆ ಮುರಾರಿ ಭಟ್ ತÀಂಜಿಗದ್ಧೆ ಚಕ್ರತಾಳದಲ್ಲಿ ಸಹಕರಿಸಿದರು. ಜನಾರ್ಧನ ಅಮ್ಮುಂಜೆ ಕಾರ್ಯಕ್ತಮ ಸಂಯೋಜಿಸಿದರು,

By suddi9

Leave a Reply

Your email address will not be published. Required fields are marked *