ಬಜಪೆ: ಶ್ರೀ ಶಾರದೋತ್ಸವ ಸಮಿತಿ ಇದರ ಆಶಯದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.20 ಮಂಗಳವಾರ ಬೆಳಿಗ್ಗೆ ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಲ್ಲಿ ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠೆಯೊಂದಿಗೆ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಪ್ರಾರಂಭಗೊಳ್ಳಲಿದೆ.

ಇದಕ್ಕೂ ಮೊದಲು ಬಜಪೆ ಶ್ರೀ ವಿಜಯ ವಿಠಲ ಭಜನಾ ಮಂದಿರದಿಂದ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಮೆರವಣಿಗೆಯಲ್ಲಿ ದೇವತಾ ಪ್ರಾರ್ಥನೆ ಸ್ಥಳ ಶುದ್ಧಿ, ಗಣಹೋಮ, ಕಣಿಶೋತ್ಸವ ಬಳಿಕ ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಮೂರೂ ದಿನಗಳಲ್ಲಿ ನಾನಾ ಭಜನಾ ಮಂಡಳಿಗಳಿಂದ ನಿರಂತರ ಭಜನೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮ:
ಅ.20 ಮಧ್ಯಾಹ್ನರಿಂದ ಅಶೋಕ್ ಪೊಳಲಿ ಬಳಗದ ನೃತ್ಯ ವೈವಿಧ್ಯ 2.30ರಿಂದ ಶ್ರೀ ಗುರು ವಿಜಯ ವಿಠಲ ಯಕ್ಷಗಾನ ಕಲಾಕೇಂದ್ರ ಬಜಪೆ ಇಲ್ಲಿನ ಮಕ್ಕಳಿಂದ ‘ಯಜ್ಞ ಸಂರಕ್ಷಣೆ ಶಿವಧನುರ್ಭಂಗ’ ಯಕ್ಷಗಾನ ಬಯಾಲಾಟ, ರಾತ್ರಿ 7ಕ್ಕೆ ರತ್ನಾಕರಜೋಗಿ ಪೆರಾರ ಅವರಿಂದ ಕೊಳಲು ವಾದನ ರಾತ್ರಿ 8ರಿಂದ ‘ಮೇ-22’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಅ.21 ಬುಧವಾರ ಮಧ್ಯಾಹ್ನ 12.30ರಿಂದ ತೋಸ್ನೆಪುಷ್ಕಳ್ ಕುಮಾರ್ ಅವರಿಂದ “ಸತಿ ಸಕ್ಕು ಬಾಯಿ’ ಹರಿಕಥಾ ಕಾಲಕ್ಷೇತ್ರ 2.30 ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಸಂಜೆ 5ರಿಂದ ಶ್ರೀ ಸೋಮನಾಥೇಶ್ವರ ಯಕ್ಷನಿಧಿ ಪೊರ್ಕೋಡಿ ಇವರಿಂದ ಯಕ್ಷಗಾನ ‘ಬ್ರಹ್ಮಕಪಾಲ’ ಪ್ರದರ್ಶನಗೊಳ್ಳಲಿದೆ. ರಾತ್ರಿ 8ರಿಂದ ಸ್ಥಳೀಯ ಪ್ರತಿಭೆಗಳಿಂದ ಹಾಗೂ 8.30ರಿಂದ ಥಂಢರ್ ಗೈಸ್ ಡಾನ್ಸ್ ಫೌಂಡೇಶನ್ ಬಜಪೆ ಇವರಿಂದ ನೃತ್ಯ ವೈವಿಧ್ಯ.
ಅ.22 ಗುರುವಾರ ಬೆಳಿಗ್ಗೆ 8ರಂದ ಮೋಹನ್ ಕಳವಾರು ಇವರಿಂದ ಸ್ಯಾಕ್ಲೋಫೋನ್ ವಾದನ, ಬೆಳಿಗ್ಗೆ 10ರಿಂದ ಯಕ್ಷಗಾನ ತಾಳಮದ್ದಳೆ’ ಅತಿಕಾರ್ಯ ಮೋಕ್ಷ’ 2.30ರಂದ ನವೀನ್ ಚಂದ್ರ ಕೊಪ್ಪ ಬಳಗದ ಸಂಗೀತ ರಸಮಂಜರಿ ಜರಗಲಿದೆ.
ಮಧ್ಯಾಹ್ನ 1.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ಕ್ಕೆ ಮಹಾಪೂಜೆ ಬಳಿಕ 6.45ರಿಂದ ಶ್ರೀ ಶಾರದಾ ಮಾತೆಯ ಭವ್ಯ ಶೊಭಾಯಾತೆ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಶಂಕರದಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
