ಅಬುಧಾಬಿ: ವೀರೂ, ಯುವಿಗಿಂತ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿಜೀವನ ಖತಂ ಆಗುತ್ತದೆಂಬ ಆತಂಕ ಷುರುವಾಗಿದೆ. ಏಕೆಂದರೆ ಗೌತಮ್ ಗಂಭೀರ್ ಅತ್ಯಂತ ಕೆಟ್ಟ ಫಾರಂನಲ್ಲಿದ್ದು, ಐಪಿಎಲ್ನಲ್ಲೂ ಕೂಡ ಕಳಪೆ ಫಾರಂನಿಂದ ಹೊರಬಂದಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಗಂಭೀರ್ ಆಡಿರುವ ಮೂರು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿ ಖಾತೆಯನ್ನೇ ತೆರೆಯದೇ ಕಂಗಾಲಾಗಿದ್ದಾರೆ. ಡೇರ್ ಡೆವಿಲ್ಸ್ ವಿರುದ್ಧ ಗಂಭೀರ ನಾಲ್ಕು ಎಸೆತ ಎದುರಿಸಿ 0 ರನ್ ಗಳಿಸಿದರು.
ಆರ್ಸಿಬಿ ವಿರುದ್ಧ ಗಂಭೀರ ಒಂದು ಎಸೆತ ಎದುರಿಸಿ ಡಕ್ಗೆ ಔಟಾದರು. ಹೀಗೆ ಐಪಿಎಲ್ ಸೀಸನ್ 7 ರ ಮೂರು ಪಂದ್ಯಗಳಲ್ಲಿ ಡಕ್ಗೆ ಔಟಾಗುವ ಮೂಲಕ ಕ್ರಿಕೆಟ್ನಲ್ಲಿ ಗೌತಮ್ ಲಯ ಕಳೆದುಕೊಂಡಿದ್ದಾರೆ. ಗಂಭೀರ್ ಟೀಂ ಇಂಡಿಯಾಗೆ ಕಮ್ಬ್ಯಾಕ್ ಆಗಬಹುದೆಂದು ಭಾವಿಸಲಾಗಿತ್ತು. ಆದರೆ ಈಗ ಕಮ್ಬ್ಯಾಕ್ ಆಗಲಿ ಖಾತೆ ತೆರೆಯುವುದಕ್ಕೂ ಒದ್ದಾಟ ನಡೆಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಗಂಭೀರ್ ಅದೃಷ್ಟ ಕುಲಾಯಿಸದೇ ಮಂಕಾಗಿದ್ದಾರೆ.. ದೇಸಿ ಟೂರ್ನಿಗಳಲ್ಲೂ ಗಂಭೀರ್ ಮಿಂಚುತ್ತಿಲ್ಲ.ಅಲ್ಲೂ ಕೂಡ ಅವರ ಹಣೆಬರಹ ಬದಲಾಗಲಿಲ್ಲ. ಗಂಭೀರ್ ಕ್ರಿಕೆಟ್ ಜೀವನಕ್ಕೆ ಅಂತಿಮ ತೆರೆ ಬೀಳುತ್ತದೆಯೇ ಎಂಬ ಸಂಶಯ ಆವರಿಸಿದೆ.
ಕಳೆದ ಒಂದೂವರೆ ವರ್ಷದಿಂದ ಗಂಭೀರ್ ಅದೃಷ್ಟ ಕುಲಾಯಿಸದೇ ಮಂಕಾಗಿದ್ದಾರೆ.. ದೇಸಿ ಟೂರ್ನಿಗಳಲ್ಲೂ ಗಂಭೀರ್ ಮಿಂಚುತ್ತಿಲ್ಲ.ಅಲ್ಲೂ ಕೂಡ ಅವರ ಹಣೆಬರಹ ಬದಲಾಗಲಿಲ್ಲ. ಗಂಭೀರ್ ಕ್ರಿಕೆಟ್ ಜೀವನಕ್ಕೆ ಅಂತಿಮ ತೆರೆ ಬೀಳುತ್ತದೆಯೇ ಎಂಬ ಸಂಶಯ ಆವರಿಸಿದೆ.