ಬಂಟ್ವಾಳ,ಅ.16:ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಚೈತನ್ಯ ವಿಜ್ಞಾನ ಕೇಂದ್ರ ಗೋಳ್ತಮಜಲು ಇವುಗಳ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಗೋಳ್ತಮಜಲುವಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಒಂದು ದಿನದ ವಿಜ್ಞಾನ ಕಾರ್ಯಗಾರ ಜರಗಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಕಾರಿ ಕಛೇರಿಯ ಶಿಕ್ಷಣ ಸಂಯೋಜಕ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು.
1610bteph7
ಶಾಲಾಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷ ಜಿ.ಹನೀಫ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ನಿತ್ಯಾನಂದ ಪವಾಡ ರಹಸ್ಯ ಬಯಲು ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವಂತಹ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿತೋರಿಸಿದರು. ಶಿಕ್ಷಕ ಪರಮೇಶ್ವರ ಹೆಗಡೆಯವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ರಚನಾತ್ಮಕ ಬೋಧನಾ ವಿದಾನದಲ್ಲಿ ರಾಸಾಯನ ಶಾಸ್ತ್ರಕ್ಕೆ ಸಂಬಂಸಿದ ಮಾದರಿ ಪಾಠದ ಪ್ರಾತ್ಯಕ್ಷಿಕೆ ನೀಡಿದರು.

ಕಲ್ಲಡ್ಕ ಮತ್ತು ಮಾಣಿವಲಯದ ವಿಜ್ಞಾನ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಕಾರಿ ಶೇಷಶಯನ ಕಾರಿಂಜ ಭೇಟಿ ನೀಡಿ ದಿನನಿತ್ಯ ಜೀವನದಲ್ಲಿ ನಾವು ಉಪಯೋಗಿಸುವ ವೈಜ್ಞಾನಿಕ ತತ್ವಗಳ ಬಗ್ಗೆ ವಿವರಣೆ ನೀಡಿದರು. ಮುಖ್ಯ ಶಿಕ್ಷಕ ಜಯಕುಮಾರ್ ಎಸ್.ಎನ್.ಸ್ವಾಗತಿಸಿ, ಶಿಕ್ಷಕಿ ಮಂಜುಳಾ ವಂದಿಸಿದರು. ಚಿತ್ರಕಲಾ ಶಿಕ್ಷಕ ಸುಂದರ ತೋಡಾರ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *