ಬಂಟ್ವಾಳ: ಜ್ಯೋತಿಗುಡ್ಡೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 14ರಂದು ಯಕ್ಷ ಪಂಚ ಕಲ್ಯಾಣ ವೇದಿಕೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ತುಂಬೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಚಿರಾಗ್ ಮತ್ತು ಸುಮಯ್ಯಾತುಲ್ ಆಸ್ಮೀನಾ ಇವರಿಗೆ ಯಾದವ ಕೆಮ್ಮಟ್ಟೆ ಇವರು ಸಮ್ಮಾನಿಸಿದರು.ದೇವಸ್ಥಾನದ ಸೇವಾ ಸಮಿತಿ ಸಂಚಾಲಕ ನಾರಾಯಣ ನಾಯ್ಕ, ಶ್ರೀ ದುರ್ಗಾಪರಮೇಶ್ವರಿ ಅಮ್ಮ ಉಪಸ್ಥಿತರಿದ್ದರು.
1610bteph5
ಉದಯಕುಮಾರ್ ಜ್ಯೋತಿಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೋಹನದಾಸ್ ಜ್ಯೋತಿಗುಡ್ಡೆ ವಂದಿಸಿದರು. ನಂತರ ಎಳೆಯರ ಬಳಗ ಹವ್ಯಾಸಿ ಯಕ್ಷಗಾನ ಮಂಡಳಿ ರಾಮಲ್ಕಟ್ಟೆ ಹಾಗೂ ಅಥಿತಿ ಕಲಾವಿದರ ಕೂಡುವಿಕೆಯಲ್ಲಿ ರತಿಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಜರಗಿತು.

By Suddi9

Leave a Reply

Your email address will not be published. Required fields are marked *