ಮೂಡುಬಿದರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಮುಂಬೈ ಉದ್ಯಮಿ ಮನೋಜ್ ಶೆಟ್ಟಿ ರೂ.25 ಸಾವಿರ ಚೆಕ್ ಅನ್ನು ಹಸ್ತಾಂತರಿಸಿದರು.

ಬಜರಂಗದಳದ ಮುಖಂಡರಾದ ಸೋಮನಾಥ್ ಕೋಟ್ಯಾನ್, ಭರತ್, ಬಿಜೆಪಿ ನಗರ ಶಕ್ತಿ ಕೇಂದ್ರದ ಸಹಸಂಚಾಲಕ ನಾಗರಾಜ ಪೂಜಾರಿ, ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ, ವಿವೇಕ್, ಯಶೋಧರ್, ಅಶೋಕ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
