ಮೂಡುಬಿದರೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಹೊಸಬೆಟ್ಟುವಿನ ಹೋಲಿ ಕ್ರಾಸ್ ಸಮುದಾಯ ಭವನದಲ್ಲಿ ವೈದ್ಯಕೀಯ ಉಚಿತ ಶಿಬಿರ ನಡೆಯಿತು.
ಕಣಚೂರು ಆಸ್ಪತ್ರೆಯ ಆರ್ಎಂಒ ಡಾ.ರೋಹನ್ ಮೋನಿಸ್ ಶಿಬಿರ ಉದ್ಘಾಟಿಸಿದರು. ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ನ ಧರ್ಮಗುರು ರೆ.ಫಾ ಸಂತೋಷ್ ರೊಡ್ರಿಗಸ್ ಅಧ್ಯಕ್ಷತೆವಹಿಸಿದ್ದರು.

ಕಣಚೂರು ಆಸ್ಪತ್ರೆ ಮತ್ತು ಸಂಶೊಧನಾ ಕೆಂದ್ರದ ಡೀನ್ ಡಾ.ಕಾಜಾ ನಸಿರುದ್ದೀನ್ ಮುಖ್ಯ ಆಥಿತಿಯಾಗಿದ್ದರು.
ಆಸ್ಪತ್ರೆ ಪಿಆರ್ಒ ಶುಭಕರ್ ಅಂಚನ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಹೊಸಬೆಟ್ಟು ಗ್ರಾ.ಪಂ ಅಧ್ಯಕ್ಷ ಮನೋಜ್ ಆಳ್ವಾರಿಸ್, ಚರ್ಚ್ ಪಾಲನ ಸಮಿತಿಯ ಉಪಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್, ಕಾರ್ಯದರ್ಶಿ ಉರ್ಬನ್ ಮಿನೇಜಸ್, ಹೊಸಬೆಟ್ಟು ಐಸಿವೈಎಂ ಪ್ರೇರಕ ವಿಲ್ಫ್ರೆಡ್ ಮೆಂಡೋನ್ಸ್ ಉಪಸ್ಥಿತರಿದ್ದರು.
ಕ್ಯಥೋಲಿಕ್ ಸಭಾದ ಅಧ್ಯಕ್ಷ ಮನೋಹರ್ ಕುಟಿನ್ಹಾ ಸ್ವಾಗತಿಸಿದರು. ಫ್ರೆನ್ನಿ ಸೇರಾ ಕಾರ್ಯಕ್ರಮ ನಿರೂಪಿಸಿದರು. ಐಸಿವೈಎಂ ಜೇಶ್ಮಾ ಪಾಯ್ಸ್ ಕಾರ್ಯದರ್ಶಿ ವಂದಿಸಿದರು. ಐಸಿವೈಎಂ, ಕ್ಯಾಥೋಲಿಕ್ ಸಭಾ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
