ಉಳ್ಳಾಲ: ಕಾರು ಮತ್ತು ಬೈಕ್‍ನಲ್ಲಿ ಬಂದ ಆಗಂತುಕರು ಕಾರಿನ ಗ್ಲಾಸ್ ಹೊಡೆದು ತಲವಾರು ತೋರಿಸಿ ವೈನ್‍ಶಾಪ್ ಮಾಲಕನಿಂದ 1.68 ಲಕ್ಷ ರೂ. ದರೋಡೆ ಮಾಡಿ ಪರಾರಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್ ಬಳಿ ವೈನ್‍ಶಾಪ್ ಹೊಂದಿರುವ ಹರೀಶ್ ಶೆಟ್ಟಿ ಎಂಬವರೇ ದರೋಡೆಗೊಳಗಾದವರು. ವೈನ್ ಶಾಪ್ ಬಂದ್ ಮಾಡಿ ಮನೆಗೆ ತೆರಳಲ್ಲು ಕಾರಿನಲ್ಲಿ ಕುಳಿತಾಗ ಈ ಘಟನೆ ನಡೆದಿದ್ದು,ಹಣ ದರೋಡೆ ನಡೆಸಿದ ಬಳಿಕ ಕಾರು ಮತ್ತು ಬೈಕ್‍ನಲ್ಲಿ ಆಗಂತುಕರು ಪರಾರಿಯಾಗಿದ್ದಾರೆ.
ಘಟನೆಯ ವಿವರ : ಹರೀಶ್ ಶೆಟ್ಟಿ ಭಾನುವಾರದ ವ್ಯವಹಾರದ ಹಣವನ್ನು ಹಿಡಿದುಕೊಂಡು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕುಳಿತುಕೊಳ್ಳಲು ಅನುವಾಗುತ್ತಿದ್ದಂತೆ ಒಬ್ಬಾತ ಮೂವರ ತಂಡ ಕಾರಿನ ಬಳಿ ಬಂದಿದ್ದು, ಒಬ್ಬಾತ ತಲವಾರಿನಿಂದ ಕಾರಿನ ಗ್ಲಾಸ್‍ಗೆ ಹೊಡೆದು ಹಣ ನೀಡುವಂತೆ ಬೆದರಿಸಿದ್ದಾನೆ. ಈ ಸಂದರ್ಭದಲ್ಲಿ ಹರೀಶ್ ಅವರ ಕುತ್ತಿಗೆಯಲ್ಲಿ ಬಂಗಾರದ ಸರಕ್ಕೂ ಕೈ ಹಾಕಿ ಎಳೆದಿದ್ದು, ಅದು ತುಂಡಾಗಿ ಅಂಗಿಯೊಳಗೆ ಬಿದ್ದಿತ್ತು. ತಲವಾರಿನಿಂದ ಹೊಡೆಯುತ್ತಿದ್ದಂತೆ ಹಣವನ್ನು ದೋಚಿದ ದರೋಡೆಕೋರರು ತಾವು ಬಂದಿದ್ದ ಬೈಕ್ ಮತ್ತು ಕಾರಿನಲ್ಲಿ ಪರಾರಿಯಾಗಿದ್ದಾರೆ. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳೀಯ ಅಂಗಡಿಯವರು ಓಡಿ ಬಂದಾಗ ದರೋಡೆಕೋರರು ಪರಾರಿಯಾಗಿದ್ದರು. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
