ಉಳ್ಳಾಲ: ಮಾನಸಿಕವಾಗಿ ನೊಂದು ಕೋಟೆಕಾರು ನಿವಾಸಿ ಹರೀಶ್ (36)ಆತ್ಮಹತ್ಯೆಗೈದ ಘಟನೆ ಕೋಟೆಕಾರು ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಎಂಆರ್‍ಪಿಎಲ್‍ನಲ್ಲಿ ಚಾಲಕನಾಗಿದ್ದ ಹರೀಶ್ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಈತನ ಪತ್ನಿ ತನ್ನ ಮಗುವಿನೊಂದಿಗೆ ಕುಂದಾಪುರದಲ್ಲಿರುವ ತಾಯಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ಪತ್ನಿ ಮತ್ತು ಮಗು ಮನೆಯಿಂದ ಹೋದ ಬಳಿಕ ಮಾನಸಿಕವಾಗಿ ನೊಂದಿದ್ದ ಹರೀಶ್ ಮನೆಯ ಬಚ್ಚಲು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದು, ಹರೀಶ್‍ನ ಮನೆಯವರು ಈತ ಕಾಣದ್ದನ್ನು ಕಂಡು ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮದ್ಯೆಯೇ ಮೃತಪಟ್ಟಿದ್ದ ಎನ್ನಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
