ಉಳ್ಳಾಲ: ಕೋಟೆಕಾರು ಸರ್ಕಲ್ ಬೀಡಿ ಯೂನಿಯನ್ ತೊಕ್ಕೊಟ್ಟು ಒಳಪೇಟೆ ಇದರ ಕಾರ್ಯಕಾರಿ ಸಮಿತಿ ಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎ. 1ರಿಂದ ಜಾರಿಯಾದ ತುಟ್ಟಿಭತ್ಯೆಯನ್ನು ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ನೀಡದೆ ವಂಚನೆ ಮಾಡುವುದರ ವಿರುದ್ಧ ಅ. 8ರಂದು ಗುರುವಾರ ಬೆಳಿಗ್ಗೆ 9.30ಕ್ಕೆ ಬೀಡಿ ಕಾರ್ಮಿಕರು ಅಬ್ಬಕ್ಕ ಸರ್ಕಲ್ ಬಳಿ ಒಟ್ಟು ಸೇರಿ ಗುರುಪುರ ಬೀಡಿ ಡಿಪೋ, ಸಿ.ಜೆ ಟೋಬಾಕೋ ಬೀಡಿ ಡಿಪ್ಪೋ ಹಾಗೂ ಭಾರತ್ ಬೀಡಿ ವಕ್ರ್ಸ್ ಉಳ್ಳಾಲ ಬೀಡಿ ಡಿಪೋದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *