ಮೂಡುಬಿದರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳೆಯರ ತಂಡ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಹಾಗೂ ಸೋಮೇಶ್ವರ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಇದರ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ಪ್ರಥಮ ಸಿ.ಎಂ. ಗೋಲ್ಡ್ ಕಪ್ ಅಖಿಲ ಭಾರತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಸೂಪರ್ ಲೀಗ್ ಮಾದರಿಯಲ್ಲಿ ಜರುಗಿದ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಛತ್ತೀಸ್‍ಗಢ, ಮುಂಬೈ, ಕರ್ನಾಟಕ, ಮೈಲಾಪುರದ ಲೇಡಿ ಶಿವಸ್ವಾಮಿ, ಚೆನ್ನೈನ ಬಿ.ಎಸ್. ಎ. ಆರ್. ವಿಶ್ವವಿದ್ಯಾನಿಲಯ ತಂಡಗಳನ್ನು ನೇರ ಸೆಟ್‍ಗಳಿಂದ ಸೋಲಿಸಿ ಒಟ್ಟು 15 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಯಿತು. ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾಲಯ ತಂಡ ಆರು ಲೀಗ್ ಪಂದ್ಯಗಳಲ್ಲಿ ಒಟ್ಟು 14 ಅಂಕಗಳೊಂದಿಗೆ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪುರುಷರ ವಿಭಾಗದಲ್ಲಿ ಸಿಕಂದರಬಾದಿನ ದಕ್ಷಿಣ ಮದ್ಯ ರೈಲ್ವೇಸ್ ತಂಡ ಚಾಂಪಿಯನ್ ಹಾಗೂ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ದ್ವಿತೀಯ ಸ್ಥಾನಿಯಾಯಿತು.
