ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವ ಪೈಪ್ ಕಾಂಪೋಸ್ಟ್ ಉದ್ಘಾಟನ ಕಾರ್ಯಕ್ರಮ ಬುಧವಾರ ಪುದು ಗ್ರಾಮ ಪಂಚಾಯತ್ ವ್ಯಾಫ್ತಿಯ ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ನಡೆಯಿತು.ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ಪೈಪ್ ಕಾಂಪೊಸ್ಟನ್ನು ಉದ್ಘಾಟಿಸಿದರು.

ದ.ಕ.ಜಿಲ್ಲಾ ಪಂಚಾಯಿತಿನ ನೆರವು ಘಟಕದ ಮಂಜುಳಾ ಪೈಪ್ ಕಾಂಪೋಸ್ಟ್ ಬಗ್ಗೆ ಮಾತನಾಡಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಂಗ್ರಹವಾಗುವ ಕಸಗಳ ಪೈಕಿ ಹಸಿ ಕಸವನ್ನು ಪ್ರತ್ಯೇಕಿಸಿ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸುವ ವಿಧಾನವನ್ನು ಪ್ರತೀ ಮನೆಯಲ್ಲೂ ಅನುಷ್ಠಾನಗೊಳಿಸಿದಾಗ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ಸ್ವಚ್ಚತೆ ಕಾಯ್ದುಕೊಳ್ಳಲು ಸಾಧ್ಯ. ನೈರ್ಮಲ್ಯತೆಯ ಸುಸ್ಥಿರತೆ ಕಾಯ್ದುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್ ವೇದಿಕೆಯಲ್ಲಿದ್ದರು. ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀ, ಸದಸ್ಯರಾದ ಆಸೀರ್, ಖಾದರ್ ಪಾವೂರು, ಅಬ್ದುಲ್ ಖಾದರ್, ಜಾಯಿರ್ ಅಬ್ಬಾಸ್, ರಮ್ಲಾನ್, ಮನೋಜ್ ಆಚಾರ್ಯ, ಗಣೇಶ್, ಲತೀಫ್, ಹೇಮಲತಾ ವನಿತ ಮತ್ತಿತರರು ಹಾಜರಿದ್ದರು.
