ಮಡಿಕೇರಿ: ಅಪ್ರಾಪ್ತರಿಬ್ಬರು ಕಾನೂನುಬಾಹಿರವಾಗಿ ವಿವಾಹವಾಗಿ ಬಾಲಕಿ ಗರ್ಭ ಧರಿಸಿದ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ವಿಚಾರ ತಿಳಿದ ಅಂಗನವಾಡಿ ಕಾರ್ಯಕರ್ತೆ ಬಾಲಕಿಯ ಮನೆಗೆ ತೆರಳಿ ವಿಚಾರಿಸಿದರು. ಆಗ ಆಕೆ ಕರಿಕೆ ಗ್ರಾಮದ 13ನೇ ಮೈಲು ನಿವಾಸಿ ಕಲ್ಲಾಳ ಅವರ ದ್ವಿತೀಯ ಪುತ್ರ ಸುಕುಮಾರ(20) ಎಂಬಾತನನ್ನು ಪ್ರೀತಿಸಿ ವಿವಾಹವಾಗಿರುವ ವಿಚಾರ ಬಹಿರಂಗಗೊಂಡಿದೆ. ಆರೋಪಿ ಬಾಲಕಿಯನ್ನು 8 ತಿಂಗಳ ಹಿಂದೆ ಯಾರಿಗೂ ತಿಳಿಯದಂತೆ ಕಲ್ಲಾರ್ ದೇವಾಲಯಕ್ಕೆ ಕರೆದೊಯ್ದು ಪರಸ್ಪರ ಹೂವಿನಹಾರ ಹಾಕಿ ಮದುವೆ ಆಗಿದ್ದು ಗರ್ಭ ಧರಿಸಿದ್ದಾಳೆ. ಮದುವೆ ಕಾನೂನು ಪ್ರಕಾರ ಅಸಿಂಧು ಎಂದು ತೀರ್ಮಾನಿಸಿ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *