ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಮಲಾಡ್ ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಅಕ್ಟೋಬರ್.02ನೇ ಶುಕ್ರವಾರ ಸಂಜೆ 4:30 ಗಂಟೆಗೆ ಮಲಾಡ್ ಪಶ್ಚಿಮದ ಮಾರ್ವೆರೋಡ್‍ನ ರಾಧಾಕೃಷ್ಣ ರೆಸ್ಟೋರೆಂಟ್ ಸನಿಹದ (ಫೈರ್ ಬ್ರಿಗೇಡ್ ಸಮೀಪ) ದೀಪಮಾಲಾ ಕೋ. ಅಪರೇಟಿವ್ ಸೊಸೈಟಿ ಸಭಾಗೃಹದಲ್ಲಿ ರೈಲ್ವೇ ಯಾತ್ರಿ ಸಂಘದಅದಾಲತ್ ಆಯೋಜಿಸಿದೆ ಎಂದು ಮಲಾಡ್ ಕನ್ನಡ ರೈಲ್ವೇ ಯಾತ್ರಿ ಸಂಘದ ಸಲಹಾದಾರಹಾಗೂ ಮಲಾಡ್ ಕನ್ನಡ ಸಂಘದ ಅಧ್ಯಕ್ಷಹರೀಶ್ ಎನ್.ಶೆಟ್ಟಿತಿಳಿಸಿದ್ದಾರೆ.

Untitled-1 copy

ಸಂಸದ ಗೋಪಾಲ ಸಿ.ಶೆಟ್ಟಿ ಮಾರ್ಗದರ್ಶನಮತ್ತುರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಮುಂದಾಳುತ್ವದಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಇದರ ಅಧ್ಯಕ್ಷ ಆರ್.ಎಲ್ ಡಾಯಸ್ ಭಾಗವಹಿಸಿ ಪ್ರಸಕ್ತ ರೈಲು ಪ್ರಯಾಣದ ಸೌಲಭ್ಯಗಳು, ಹೆಚ್ಚುವರಿ ರೈಲು ಆರಂಭ, ಸಮಯ ಬದಲಾವಣೆ ಹಾಗೂ ಪ್ರಯಾಣಿಕರ ಸೌಕರ್ಯಗಳ ಬಗ್ಗೆ ಅಧಿಕ ಮಾಹಿತಿ ನೀಡಲಿದ್ದಾರೆ. ಅಂತೆಯೇ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‍ನಿಂದ ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ವಸಾಯಿ ರೋಡ್-ಮಂಗಳೂರು ಗಣಪತಿಉತ್ಸವ ವಿಶೇಷ ರೈಲನ್ನು ಖಾಯಂ ಗೊಳಿಸುವ ನಿಟ್ಟಿನಲ್ಲೂ ಠಾರವು ಮಂಡಿಸಿ ಕಾರ್ಯಪ್ರವೃತ್ತರಾಗುವ ಬಗ್ಗೆ ಚರ್ಚಿಸಲಾಗುವುದು ಎಂದು ರೈಲ್ವೇ ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ತಿಳಿಸಿದ್ದಾರೆ. ನಗರವಾಸಿ ರೈಲು ಪ್ರಯಾಣಿಕರು, ತುಳು-ಕನ್ನಡಿಗ ಸಂಘ ಸಂಸ್ಥೆಗಳ ಪದಾಧಿಕಾರಿ, ಸದಸ್ಯರು ಪಾಲ್ಗೊಂಡು ಸಭೆಯ ಯಶಸ್ಸಿಗೆ ಸಹಕರಿಸುವಂತೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೀಲಾ ಶೆಟ್ಟಿ ಹಾಗೂ ಮಲಾಡ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *