ಮುಂಬಯಿ:ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ನಿಯಮಿತ ಇದರ 74ನೇ ಶಾಖೆಯು ಪಾಲ್ಘರ್ ಜಿಲ್ಲೆಯ ಬೊಯಿಸರ್ನ ನೌಫೂರ್ ರಸ್ತೆಯಲ್ಲಿನ ಸನ್ಮಾನ್ ಅಪಾರ್ಟ್ ಮೆಂಟ್ನ ತಳ ಮಹಡಿಯಲ್ಲಿ ಸೆ.22 ಮಂಗಳವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ನೂತನ 74ನೇ ಶಾಖೆಯನ್ನು ರಿಬ್ಬನ್ ಕತ್ತರಿಸಿ ಶುಭಾರಂಭಗೊಳಿಸಿದರು. ಸ್ಥಾನೀಯ ಸಮಾಜ ಸೇವಕಿ ಶ್ರೀಮತಿ ಸುಹಾಸಿನಿ ನಾಕ್ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್ ಲಾಕರ್ ಸೇವೆಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಪ್ರಗತಿಗೆ ಶುಭಕೋರಿದರು.

Bharat Bank Boisar (Palghar) Branch-14

Bharat Bank Boisar (Palghar) Branch-13
Bharat Bank Boisar (Palghar) Branch-21

 

Bharat Bank Boisar (Palghar) Branch-1

 

Bharat Bank Boisar (Palghar) Branch-2

Bharat Bank Boisar (Palghar) Branch-3

Bharat Bank Boisar (Palghar) Branch-5

Bharat Bank Boisar (Palghar) Branch-6

Bharat Bank Boisar (Palghar) Branch-9

 

Bharat Bank Boisar (Palghar) Branch-11

Bharat Bank Boisar (Palghar) Branch-12

Bharat Bank Boisar (Palghar) Branch-13

Bharat Bank Boisar (Palghar) Branch-14

Bharat Bank Boisar (Palghar) Branch-15

Bharat Bank Boisar (Palghar) Branch-16

Bharat Bank Boisar (Palghar) Branch-20 (1)

Bharat Bank Boisar (Palghar) Branch-10

ಉದ್ಯಮಿ ಜಗನ್ನಾಥ್ ಭಂಡಾರಿ ಮಾತನಾಡಿ ಒಂದು ಸಹಕಾರಿ ಪಥಸಂಸ್ಥೆಯಾಗಿದ್ದುರಾಷ್ಟ್ರದ ಉದ್ದಗಲಕ್ಕೂ ಸೇವಾ ಶಾಖೆಗಳನ್ನು ತೆರೆಯುವಲ್ಲಿ ಜಯ ಸುವರ್ಣರ ದೂರದೃಷ್ಠಿತ್ವ ಹಾಗೂ ಬ್ಯಾಂಕಿಂಗ್ ವ್ಯವಹಾರ ಜ್ಞಾನದ ಫಲವೇ ಕಾರಣ. ಅಲ್ಪಾವಧಿಯಲ್ಲಿ ಇಷ್ಟೊಂದು ಶಾಖೆಗಳ ವಿಸ್ತರಣೆಗೆ ಸುಲಭ ಸಾಧ್ಯವಲ್ಲ. ಸಾಮಾಜಿಕ ಕಾಳಜಿವುಳ್ಲವರಿಂದ ಮಾತ್ರ ಇಂತಹ ಸಾಧನೆ ಸಾಧ್ಯವಾಗುವುದು. ಭಾರತ್ ಬ್ಯಾಂಕ್ನ ಮಹತ್ಕಾರ್ಯದ ಹಿಂದೆ ಇವರೆಲ್ಲರ ಅವಿರತ ಪರಿಶ್ರಮ ಅನನ್ಯವಾಗಿದೆ. ಜನಸಾಮಾನ್ಯರ ಸೇವೆಗಾಗಿ ಉದ್ಯಮ ನಗರ ಬೊಯಿಸರ್ಗೆ ಕಾಲಿರಿಸಿದ ಈ ಬ್ಯಾಂಕ್ ಎಂದೆಣಿಸಲು ಅಭಿಮಾನವಾಗುತ್ತದೆ.
ತಮ್ಮೆಲ್ಲರ ಸಾಧನೆಯ ಛಲ ಫಲಪ್ರದಗೊಂದು ನೂರಾರು ಶಾಖೆಗಳನ್ನು ತೆರೆದು ಲಕ್ಷಾಂತರ ಉದ್ಯಮಿಗಳು, ಜನಸಾಮಾನ್ಯರಪಾಲಿಗೆ ವರವಾಗಲಿ ಎಂದು ಆಶಿಸಿದರು.

ಹೊಟೇಲು ಉದ್ಯಮಿ ಭುಜಂಗ ಶೆಟ್ಟಿ ಮಾತನಾಡಿ ಭಾರತ್ ಬ್ಯಾಂಕ್ ಎಂದಾಕ್ಷಣ ನಮ್ಮೂರ ಬ್ಯಾಂಕ್ ಎಂದೇ ಭಾಸವಾಗುತ್ತದೆ. ಇದು ತುಳುಕನ್ನಡಿಗರ ಸಹೋದರತ್ವದ ಆರ್ಥಿಕ ಸಂಸ್ಥೆಯೆಂದೇ ಜನಜನಿತ. ತುಳು-ಕನ್ನಡ,ಹಿಂದಿ-ಮರಾಠಿ ಭಾಷಿಗರ ಸಮನ್ವಯತೆ ಸಾರುವ ಹಣಕಾಸು ಸಂಸ್ಥೆ. ಬೊಯಿಸರ್ನಲ್ಲಿ ಸುಮಾರು ಆರು ಲಕ್ಷ ತುಳುಕನ್ನಡಿಗರಿದ್ದಾರೆ. ಬ್ಯಾಂಕ್ನ ಉನ್ನತಿಗೆ ಅವರೆಲ್ಲರ ಪ್ರೋತ್ಸಾಹ ಅವಶ್ಯವಿದೆ. ಬೊಯಿಸರ್ ಜನತೆಗೆ ಈ ಬ್ಯಾಂಕ್
ಕಲ್ಪವೃಕ್ಷವಾಗುತ್ತಾ ಬ್ಯಾಂಕ್ ಮಂಡಳಿಯ ಮನದೊಲವು ನನಸಾಗಲಿ ಎಂದರು.

ಉದ್ಯಮಿ ಕೆ.ಶ್ರೀನಿವಾಸ್ ಕೋಟ್ಯಾನ್ ಮಾತನಾಡಿ ಈ ಬ್ಯಾಂಕ್ನಲ್ಲಿ ನನ್ನ ಅವಿನಾಭಾವ ಸಂಬಂಧವಿದೆ. ಇದರ ಫಲಾನುಭವಿಗಳೆಲ್ಲರೂ ಸಾಧಕರಾಗಿದ್ದಾರೆ. ಸಮಾಜಮುಖಿ ಚಿಂತನೆಯ ವಿಶಿಷ್ಟಗುಣ ಮೈಗೂಡಿಸಿ ಕೊಂಡಿರುವ ಬ್ಯಾಂಕ್ ಮಂಡಳಿ, ಅಧಿಕಾರಿ ವರ್ಗವ ಸೇವೆ ಸ್ತುತ್ಯರ್ಹ. ಭಗವಾನ್ ನಿತ್ಯಾನಂದರಅನುಗ್ರಹದೊಂದಿಗೆಈ ಬ್ಯಾಂಕ್ ಸಾಧನೆಯ ಶಿಖರಕ್ಕೇರಲಿ ಎಂದರು.ಬ್ಯಾಂಕ್ನ ನೂತನ ಶಾಖೆ ಬೊಯಿಸರ್ ನೆಲೆಯ ನಮ್ಮೂರಿನವರಿಗೆ ಹೆಮ್ಮೆಯ ವಿಚಾರ. ಬ್ಯಾಂಕ್ ಫಲವಾಗಿಸಲು ನಮ್ಮೆಲ್ಲರ ಸಹಯೋಗ ಅಗತ್ಯವಿದೆ ಎಂದು ಹೊಟೇಲು ಉದ್ಯಮಿ ರಘುರಾಮ ರೈ ಶುಭ ಕೋರಿದರು.

ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಸತ್ಯಾ ಎಂ.ಕೋಟ್ಯಾನ್, ಕಟ್ಟಡದ ಮಾಲೀಕರುಗಳಾದ ಯೋಗೇಶ್ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಸುಕುಮಾರ್ ಶೆಟ್ಟಿ, ಸುಂದರ್ ಪೂಜಾರಿ, ರಾಜು ಠಾಕೂರ್, ದೇವರಾಜ್ ಪೂಜಾರಿ ಡೊಂಬಿವಿಲಿ, ಸುನೀತಾ ಎಸ್.ಅಮೀನ್, ಶಕುಂತಳಾ ಬಿ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಯುವ ವಿಭಾಗಧ್ಯಕ್ಷ ನಿಲೇಶ್ ಬಿ.ಪೂಜಾರಿ, ಸಮಾಜ ಸೇವಕರುಗಳಾದ ಶ್ರೀನಿವಾಸ ಕರ್ಕೇರ, ನಾಗೇಶ್ ಪೂಜಾರಿ, ಯಶವಂತ ಕೋಟ್ಯಾನ್, ಚಂದಯ್ಯ ಕರ್ನೆರೆ, ಪದ್ಮನಾಭ ಕೆ.ಪೂಜಾರಿ ಸೇರಿದಂತೆ ಸ್ಥಳಿಯ ನೂತನ ಗ್ರಾಹಕರು, ಹಿತೈಷಿಗಳು ಆಗಮಿಸಿ ನೂತನ ಶಾಖೆಗೆ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ನ ನಿರ್ದೇಶಕರುಗಳಾದ ಕೆ.ಬಿ ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಗಂಗಾಧರ ಪೂಜಾರಿ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್ ಗುಜರನ್, ಅವೀಶ್ ಎಸ್.ಪೂಜಾರಿ, ವಿಜಯ್ ಪಾಲನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಜಯ ಸಿ.ಸುವರ್ಣ, ಸಿ.ಆರ್ ಮೂಲ್ಕಿ, ಬ್ಯಾಂಕ್ ಮುಖ್ಯ ಪ್ರಧಾನ
ವ್ಯವಸ್ಥಾಪಕ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕ ಸುರೇಶ್ ಎಸ್.ಸಾಲ್ಯಾನ್ ಅವರು ಶಾಖೆಯ ಮುಖ್ಯಸ್ಥ ಪ್ರಕಾಶ್ ವಿ.ಸಾಲ್ಯಾನ್, ಸಹಾಯಕ ಪ್ರಬಂಧಕಿ ಜ್ಯೋತಿ ಜವಾಹರ್ಕರ್, ಸಿಬ್ಬಂದಿಗಳಾದ ವಿವೇಕ್ ಮಾಬಿಯಾನ್, ಚೇತನ್ ಪೂಜಾರಿ, ಶ್ರೇಯಾ ಪೂಜಾರಿ, ಸಮೀಕ್ಷಾ ರಾವುತ್, ಗಣೇಶ್ ಡುಬ್ಲಾ ಅವರನ್ನು ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.

ಉಳ್ಳೂರು ದಿನೇಶ್ ಶಾಂತಿ ಮತ್ತು ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ನೂತನ ಶಾಖೆಯ ಸಹಾಯಕ ಪ್ರಬಂಧಕಿ ಜ್ಯೋತಿ ಜವಾಹರ್ಕರ್ ಮತ್ತು ರಾಜೇಶ್ ಜವಾಹರ್ಕರ್ ಹಾಗೂ ಸಮೀಕ್ಷಾ ರಾವುತ್ ಮತ್ತು ರಾಹುಲ್ ರಾವುತ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿ, ಬ್ಯಾಂಕ್ನ ಸೇವಾವೈಖರಿಯನ್ನು ಪ್ರಸ್ತಾಪಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ವಿ.ಸಾಲ್ಯಾನ್ ಕೃತಜ್ಞತೆ ಸಮರ್ಪಿಸಿದರು.

ಚಿತ್ರ ವರದಿ ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *