ಮುಂಬಯಿ:ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ ಪೂಜಿಸಲ್ಪಡುವಶ್ರೀ ವಿನಾಯಕನ ದರ್ಶನವನ್ನು ಬಂಟ್ವಾಳ ತಾಲೂಕು
ಮುರುವ ಇಲ್ಲಿನ ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಪಡೆದರು.


ಸೆ.21ರಂದು ಸೋಮವಾರ ಸಂಜೆ ಮಹಾನಗರಿ ಮುಂಬಯಿಗೆ ಪಾದಾರ್ಪಣೆಗೈದ ಮಾಣಿಲಾಶ್ರೀಗಳು ಶ್ರೀರಾಮ ಮಂದಿದಲ್ಲಿ ಆಚರಿಸಲ್ಪಡುವ ಗಣೇಶೋತ್ಸವ ಆರಾಧನೆಯಲ್ಲಿ ಪಾಲ್ಗೊಂಡು ಶ್ರೀ ಗಣೇಶನಿಗೆ ವಿಶೇಷ ಪೂಜೆನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ವಿಶ್ವಸ್ಥ ಕಾಯರ್ಾಧ್ಯಕ್ಷ ಎನ್.ಎನ್.ಪಾಲ್ ಅವರು
ಮಾಣಿಲಾಶ್ರೀ ಸ್ವಾಮೀಜಿ ಅವರನ್ನು ಸಾಂಪ್ರದಾಯಿಕವಾಗಿ ಸ್ಮರಣಿಕೆಯನ್ನಿತ್ತು ಫಲಪುಷ್ಪಗಳನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಮುಂದಾಳುಗಳಾದ ಎಂ.ವಿ ಕಿಣಿ, ಉಲ್ಲಾಸ್ಡಿ .ಕಾಮತ್, ಗೋವಿಂದ್ ಎಸ್.ಭಟ್, ಸುಭಾಶ್ ಪೈ, ಸುನೀಲ್ ಪೈ, ಅಕ್ಷಯ್ ಪೈ, ಉದ್ಯಮಿ ರಾಜೇಶ್
ಪಾಟೀಲ್, ಕೃಷ್ಣ ಬಂಜನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸೆ.27ನೇ ಭಾನುವಾರ ಅನಂತ ಚತುರ್ದಶಿ ದಿನ ಈ ಗಣಪತಿ ವಿಸರ್ಜನೆಗೊಳ್ಳಲಿದೆ.



