ದುಬೈ: ಶೇಖ್ ರಶೀದ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದು ಅವರಿಗೆ 34 ವರ್ಷ ವಯಸ್ಸಾಗಿತ್ತು. ಶೇಖ್ ರಶೀದ್ ಅವರು ಯುಎಇ ಪ್ರಧಾನ ಮಂತ್ರಿ ಹಾಗೂ ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಹಿರಿಯ ಪುತ್ರ .

dubaidore

ಶೇಖ್ ರಶೀದ್ ಅವರು ಕುದುರೆಗಳ ಅಪಾರ ಪ್ರೇಮಿ ಮತ್ತು ಕುದುರೆಗಳ ಮಾಲೀಕರೂ ಆಗಿದ್ದರು. ಶೇಖ್ ರಶೀದ್ ಅವರ ನಿಧನ ಹಿನ್ನೆಲೆಯಲ್ಲಿ ಮೂರು ದಿನದ ಶೋಕಾಚರಣೆ ಘೋಷಿಸಲಾಗಿದೆ. ಯುಎಇ ಧ್ವಜಗಳು ಶೋಕಾಚರಣೆಯ ಅವಧಿಯಲ್ಲಿ ಅರ್ಧ ಮಟ್ಟದಲ್ಲಿ ಹಾರಾಡಲಿದ್ದು ದುಬೈ ಸರ್ಕಾರಿ ಇಲಾಖೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಶೇಖ್ ರಶೀದ್ ಅವರ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ.

By suddi9

Leave a Reply

Your email address will not be published. Required fields are marked *