ಜೋಹಾನ್ಸ್ ಬರ್ಗ್: ಆದಿಮ ಮನುಷ್ಯನದೆಂದು ನಂಬಲಾಗಿರುವ ಅಸ್ತಿಪಂಜರಗಳನ್ನು ದಕ್ಷಿಣ ಆಫ್ರಿಕಾದ ಅತ್ಯಂತ ಪುರಾತನ ಗುಹೆಯೊಂದರಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸುಮಾರು 30 ಲಕ್ಷ ವರ್ಷ ಹಳೆಯದ್ದೆಂದು ಹೇಳಲಾಗುವ ಈ ಅಸ್ತಿಪಂಜರಗಳನ್ನು ಮೊದಲ ಬಾರಿಗೆ ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಗಿದೆ.
ಆಧುನಿಕ ಮನುಷ್ಯನ ಅತ್ಯಂತ ಹತ್ತಿರದ ಪೂರ್ವಿಕರು ಎಂದು ಭಾವಿಸಲಾಗಿರುವ ಈ ವರ್ಗವನ್ನು homo ಟಿಚಿಟeಜi ಎಂದು ವಿಜ್ಞಾನಿಗಳು ಹೆಸರಿಸಿದ್ದು, ಮನುಷ್ಯನ ಪೂರ್ವಿಕರ ಕುರಿತಾದ ಇದುವರೆಗಿನ ನಂಬಿಕೆಗಳನ್ನು ಈ ಹೊಸ ಪೂರ್ವಿಕ ತಪ್ಪೆಂದು ಸಾರುತ್ತಾನೆ ಎಂದು ಸಂಶೋಧಕರು ಹೇಳಿದ್ದಾರೆ.ಬೆನ್ನೆಲುಬು ಎದ್ದು ನಿಂತಿರುವ ಈ ವರ್ಗವು ಆಧುನಿಕ ಮನುಷ್ಯನ ಅತ್ಯಂತ ಸಮೀಪದ ಲಕ್ಷಣಗಳನ್ನು ಹೊಂದಿದೆ. ಆದರೆ, ಭುಜ ಹಾಗೂ ತಲೆಯ ಭಾಗ ವಾನರ ವರ್ಗ ಗಳನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪತ್ತೆಯಾದ ತಲೆಬುರುಡೆ ಹಾಗೂ ಕೈಕಾಲುಗಳ ಅಸ್ತಿಗಳನ್ನು ಜೋಡಿಸಿದಾಗ ಅದು 15 ವಿವಿಧ ವ್ಯಕ್ತಿಗಳೆಂದು ತಿಳಿದು ಬಂದಿದೆ. ಆದಾಗ್ಯೂ, ಅಸ್ತಿಪಂಜರ ಮನುಷ್ಯನ ಪೂರ್ವಿಕರದ್ದು ಎಂದು ಖಚಿತವಾಗಿ ಒಪ್ಪಿಕೊಳ್ಳಲು ವಿಜ್ಞಾನಿಗಳು ನಿರಾಕರಿಸಿದ್ದಾರೆ. ದಕ್ಷಿಣಾಫ್ರಿಕಾದ ರಾಜಧಾನಿ ಜೋಹಾನ್ಸ್ ಬರ್ಗ್ ನಿಂದ ಮೂವತ್ತು ಮೈಲಿ ದೂರದಲ್ಲಿರುವ ಗುಹೆಯಲ್ಲಿ ಈ ಅಸ್ತಪಂಜರಗಳಿ ಪತ್ತೆಯಾಗಿವೆ.

