ಬಂಟ್ವಾಳ: ಓಮ್ನಿ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನಸಾಗಿಸುತ್ತಿದ್ದುದನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಮುಂಜಾನೆ ಬಿ.ಸಿ.ರೋಡಿನಲ್ಲಿ ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಲೊರೆಟ್ಟೋ ನಿವಾಸಿಗಳಾದ ನಾಸಿರ್ , ಸಿದ್ದೀಕ್ ಮತ್ತು ಸಿದ್ದೀಕ್ ಎಂಬವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.


ಶುಕ್ರವಾರ ಮುಂಜಾನೆ ಬಿ.ಸಿ.ರೋಡಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮೆಲ್ಕಾರ ಕಡೆಯಿಂದ ಅನುಮಾನಾಸ್ಪದವಾಗಿ ಬಂದ ಓಮ್ನಿ ಕಾರನ್ನು ನಿಲ್ಲಿಸಿದಾಗ ಕಾರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದು, ಕಾರಿನಲ್ಲಿ ನಾಲ್ಕು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ದನಗಳನ್ನು ಮುಡಿಪುವಿನ ಕದ್ದು ತಂದಿರಬಹುದೆಂದು ಶಂಕಿಸಲಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಟ್ವಾಳ ನಗರಠಾಣೆಯ ಉಪನಿರೀಕ್ಷಕ ನಂದಕುಮಾರ್, ಚಾಲಕ ಸಂಪತ್, ಸಿಬ್ಬಂದಿಗಳಾದ ಕೃಷ್ಣ, ಅದ್ರಾಮ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.


