ಬಂಟ್ವಾಳ: ಕೇಂದ್ರಿಯ ಕಾರ್ಮಿಕ ಶಿಕ್ಷಣ ಮಂಡಳಿ ಮಂಗಳೂರು ಇದರ ವತಿಯಿಂದ ನಡೆದ ಕಾರ್ಮಿಕ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಡಯಾನ ಲೋಬೋ ಪಂಜಿಕಲ್ಲು ಮತ್ತು ರಮಣಿ ಮೊಡಂಕಾಪು ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಕುದುರೆಮುಖ ಅದಿರು ಕಂಪೆನಿಯ ಎಜಿಎಂ ಶಂಕರ್ ಕರ್ನಮ್, ನೊಡೆಲ್ ಅಧಿಕಾರಿ ರಮಾನಾಥ ಶ್ಯಾನುಬಾಗ್, ಆಡಳಿತಾಧಿಕಾರಿ ಭವಾನಿಶಂಕರ್ ಶೆಟ್ಟಿ, ಪಡಿ ಮಂಗಳೂರು ನಿರ್ದೇಶಕ ರೆನ್ನಿ ಡಿ’ಸೋಜಾ, ಕಾರ್ಮಿಕ ಶಿಕ್ಷಣ ಕೇಂದ್ರದ ಪ್ರಭಾರ ವಲಯ ನಿರ್ದೇಶಕ ನಾಗೇಶ್ ಕುಮಾರ್, ಶಿಕ್ಷಣಾಧಿಕಾರಿ ಶಂಕರಲಿಂಗೇ ಗೌಡ, ಸಂಘಟಕ ದಿನೇಶ್ ಅಮೀನ್ ಉಪಸ್ಥಿತರಿದ್ದರು.

