ಚಿತ್ರ-ವರದಿ: ನರೇಂದ್ರ ಕೆರೆಕಾಡ
* ಮೂಲ್ಕಿ ಹೆದ್ದಾರಿಯಲ್ಲಿ ನಡೆದ ಘಟನೆ * 30ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು
ಮೂಲ್ಕಿ, ಏ.19-ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಕೊಲ್ನಾಡು ಬಳಿ ಇಂದು ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಮೃತಪಟ್ಟು ಎರಡೂ ಬಸ್ಸಿನ 30ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ದುದರ್ೈವಿಯನ್ನು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಧಾರವಾಡದ ನವಲಗುಂದ ತಾಲ್ಲೂಕಿನ ನಿವಾಸಿ ಆನಂದ ಬಿ.ಕುಲಕಣರ್ಿ(40) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಮತ್ತೊಂದು ಬಸ್ಸಿನ ಚಾಲಕನು ಸಹ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸು ಹುಬ್ಬಳ್ಳಿಯ ಅಂಕೋಲಾ ರಸ್ತೆಯಾಗಿ ಮಂಗಳೂರಿಗೆ ಬರುತ್ತಿದ್ದು, ಖಾಸಗಿ ವೋಲ್ವೋ ಬಸ್ಸು ಬೆಂಗಳೂರಿನಿಂದ ಉಡುಪಿಯತ್ತ ಸಂಚರಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಮುಕ್ಕ ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಅವರ ವಿವರ ಪಡೆಯಲು ಪೊಲೀಸರು ಹೆಣಗಾಡುತ್ತಿದ್ದಾರೆ. ಅಲ್ಲದೇ ಪತ್ರಿಕೆ ಮೂಲ್ಕಿ ಠಾಣೆಯನ್ನು ಸಂಪಕರ್ಿಸಿದಾಗ ಇದೇ ಪ್ರತಿಕ್ರಿಯೆ ವ್ಯಕ್ತವಾಯಿತು. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಮೂಲ್ಕಿಯಲ್ಲಿದ್ದ ಆರೋಗ್ಯ ಕವಚ ಆಗಮಿಸಿ ಖಾಸಗಿ ಬಸ್ಸಿನ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡರು ಮತ್ತೋಂದು ಆರೋಗ್ಯ ಕವಚ ಅಥವ ಆಂಬ್ಯುಲೆನ್ಸ್ ಬಾರದೇ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿಮರ್ಾಣವಾಗಿತ್ತು.

Mulki Accident Photos (1)

Mulki Accident Photos (3)

Mulki Accident Photos (4) (1)

 

Mulki Accident Photos
ಅಪಘಾತದಲ್ಲಿ ಸಿಲುಕಿದ್ದ ಚಾಲಕರನ್ನು ಸ್ಥಳೀಯರೇ ಹರಸಾಹಸ ಪಟ್ಟು ಹೊರತೆಗೆದಿದ್ದು, ಗಾಯಾಳುಗಳನ್ನು ವಿವಿಧ ವಾಹನಗಳಲ್ಲಿ ಸಾಗಿಸಲು ಪೊಲೀಸರೊಂದಿಗೆ ಸಹಕರಿಸಿದರು. ಆದರೆ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಗಾಯವಾಗದೇ ಉಳಿದ ಕೆಲವೊಂದು ಪ್ರಯಾಣಿಕರು ಸಾರ್ವಜನಿಕವಾಗಿ ಉದ್ಧಟತನವಾಗಿ ವತರ್ಿಸಿದರು ಎಂದು ಪ್ರತ್ಯಕ್ಷ ದಶರ್ಿಗಳು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *