ಸುದ್ದಿ9 ಕೈಕಂಬ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಎ.25ರಿಂದ 29ರ ವರೆಗೆ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
24ಗುರುವಾರ- ವಾಸ್ತು ರಕ್ಷೊಘ್ನ ಹೋಮ
25ಶುಕ್ರವಾರ- ತೋರಣ ಹಾಗೂ ಉಗ್ರಣಾ ಮುಹೂರ್ತ.ಗಣಪತಿ ಹೋಮ, 49 ಕಲಶಾಭಿಷೇಕ, ಗಣಪತಿಗೆ, ಚಂಡಿಕೆಗೆ, ನಾಗದೇವರಿಗೆ, ಅಣ್ಣಪ್ಪ ದೈವಕ್ಕೆ ನವಕ ಪ್ರಧಾನ, ಮಧ್ಯಾಹ್ನ 12.30ಕ್ಕೆ ಧ್ವಜಾರೋಹಣ, ಮಹಾಪೂಜೆ. ಅನ್ನಸಂತರ್ಪಣೆ. ಸಂಜೆ:7ಕ್ಕೆ ಬಲಿ ಉತ್ಸವ, ಕಲ್ಕುಡ ನೇಮ.
26ಶನಿವಾರ-ಮಧಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30ಕ್ಕೆ ಬಲಿ ಉತ್ಸವ, ಪಡುಪೆರಾರ ಸವಾರಿ, ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ ಯಕ್ಷಗಾನ
27 ಆದಿತ್ಯವಾರ-ಮಧ್ಯಾಹ್ನ 12-ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಬಲಿ ಉತ್ಸವ, ಬಜ್ಪೆ ಸವಾರಿ, ರಾತ್ರಿ ಕಟೀಲು ಶ್ರೀ ದುಗರ್ಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ.
28 ಸೋಮವಾರ ಮಧ್ಯಾಹ್ನ 12 ಮಹಾಪೂಜೆ, ಅನ್ನಸಂತರ್ಪಣೆ, 12ಕ್ಕೆ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ,ಭೂತ ಬಲಿ, ಶಯನ ಪೂಜೆ.
29 ಮಂಗಳವಾರ-ಬೆಳಗ್ಗೆ9ಕ್ಕೆ: ಚಂಡಿಕಾಯಾಗ, 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಮಹಾಅನ್ನಸಂತರ್ಪಣೆ, ಸಂಜೆ 5.30ರಂದ ಜಿ.ಕೆ. ಸಂಗೀತ ತಂಡ ಗಣೇಶ್ ಮತ್ತು ಬಳಗ, ಬಜ್ಪೆ ಇವರಿಂದ ಭಕ್ತಿಗಾನ ವೈಭವ, ರಾತ್ರಿ 9ಕ್ಕೆ ಶ್ರೀ ದೇವಿ ದರ್ಶನ, 10ಕ್ಕೆ ಬಲಿ ಉತ್ಸವ ಒಕುಳಿ, ಕ್ಷೇತ್ರ ದೈವಗಳಿಗೆ ನೇಮೋತ್ಸವ ಅವಭೃತೋತ್ಸವ, ಧ್ವಜಾವರೋಹಣ ನಡೆಯಲಿದೆ.
