ಕಟೀಲು ದೇವಳದ ಎಲ್ಲಾ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣವನ್ನು ನೀಡುದರ ಮೂಲಕವಾಗಿ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಕಟೀಲು ಸಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ, ನನ್ನ ಸಂಸದರ ನಿಧಿಯಿಂದ 15 ಲಕ್ಷರೂವನ್ನು ಶತಮಾನೋತ್ಸವ ಸಭಾಭವನಕ್ಕೆ ನೀಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಲುವಾಗಿ ಶತಮಾನೋತ್ಸವ ಭವನಕ್ಕೆ ಶಿಲಾನ್ಯಾಸ ನಡೆಸಿ ಮಾತನಾಡಿದರು. ಅಧ್ಯಕ್ಷತೆವಹಿಸಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಕಟೀಲಿನಲ್ಲಿ ಒಳಚರಂಡಿ ಯೋಜನೆ ಹಾಗೂ ಬೈಪಾಸ್ ರಸ್ತೆಯ ಪ್ರಸ್ತಾವನೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ಕಟೀಲು ದೇಗುಲದ ಮೂಲಸ್ಥಳ ಭ್ರಾಮರೀವನದಲ್ಲಿ ನೂರು ಶ್ರೀಗಂಧದ ಗಿಡಗಳನ್ನು ನೆಡುವ ಯೋಜನೆಗೆ ಅರಣ್ಯ ಸಚಿವ ರಮಾನಾಥ ರೈ ಚಾಲನೆ ನೀಡಿದರು.
kateelu shilanyasa (1)

kateelu shilanyasa (2)

kateelu shilanyasa (3) (1)

kateelu shilanyasa (3)ದೇವಳದ ಅರ್ಚಕರಾದ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಉದ್ಯಮಿ ಪದ್ಮನಾ ಭಟ್, ಮುಂಬಯಿ ಉದ್ಯಮಿ ಕೃಷ್ಣ ಡಿ.ಶೆಟ್ಟಿ, ಚಂದ್ರಶೇಖರ ಬಿ, ಸಾಂತ್ಯಾ ಭಾಸ್ಕರ ಶೆಟ್ಟಿ , ಉದ್ಯಮಿ ಹರೀಶ್ ಪೂಂಜಾ, ಪಾಪ್ಯುಲರ್ ಸಂಸ್ಥೆಯ ಜಗದೀಶ ಸಿ. ಶೆಟ್ಟಿ , ಮುಂಬಯಿ ಉದ್ಯಮಿ ವೇಣುಗೋಪಾಲ ಶೆಟ್ಟಿ , ಶ್ರೀಧರ ಪೂಜಾರಿ, ಯಾದವ ಕೋಟ್ಯಾನ್, ದೊಡ್ಡಯ್ಯ ಮೂಲ್ಯ, ಈಶ್ವರ್ ಕಟೀಲು, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಗ್ರಾ. ಪಂ. ಅಧ್ಯಕ್ಷರಾದ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಈಶ್ವರ ಕಟೀಲ್‍ವಂದಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *