10 ಕೋಟಿ ಸಾಲ ನೀಡಿಕೆ ಗುರಿ
ಬಂಟ್ವಾಳ: ರೈತಾಪಿ ವರ್ಗದ ಜನರಿಗೆ ಹಾಲಿ ಆರ್ಥಿಕ ವರ್ಷದಲ್ಲಿ ಶೇ. 3 ಬಡ್ಡಿಯಲ್ಲಿ ದೀರ್ಘಾವದಿ 10 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿದ್ದು, ಈಗಾಗಲೇ 2. 5 ಕೋಟಿ ವಿತರಣೆ ಮಾಡಿದೆ ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ನಿ) ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದ್ದಾರೆ.
ಅವರು ಸೆ. 10ರಂದು ಬಿ.ಸಿ.ರೋಡ್ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೃಷಿಕರಿಗೆ ವಿದ್ಯುತ್ ನಿಲುಗಡೆ ಬಗ್ಗೆ ಪೂರ್ವ ಮಾಹಿತಿಯನ್ನು ನೀಡಬೇಕು. ಸೂಚಿತ ಸಮಯದಲ್ಲಿ ಮಾತ್ರ ಪವರ್ ಕಟ್ ಮಾಡುವುದು. ಉಳಿದ ಸಮಯದಲ್ಲಿ ವಿದ್ಯುತ್ ನಿಲುಗಡೆ ಮಾಡದಂತೆ ನಿರ್ಣಯಿಸಿ ಮೆಸ್ಕಾಂಗೆ ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಸ್ತುತ ವರ್ಷ ಸಾಲ ವಸೂಲಾತಿಯಲ್ಲಿ ಶೇ. 80 ಸಾಧನೆ ಮಾಡಿರುವ ಬಗ್ಗೆ ಮಹಾಸಭೆಯಲ್ಲಿ ಪ್ರಸ್ತಾಪಿಸಿ ಕೃಷಿಕರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ಹೊನ್ನಪ್ಪ ನಾಯ್ಕ, ಮುರಳೀಧರ ಶೆಟ್ಟಿ, ಪರಮೇಶ್ವರ ಯನ್., ಚಂದ್ರಶೇಖರ ಶೆಟ್ಟಿ, ರಾಜೇಶ ಕುಮಾರ್, ಶಿವಪ್ಪ ಪೂಜಾರಿ, ಸುಜಾತ ರೈ, ಪುಷ್ಪಾವತಿ, ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಶೇಖರ ಎಂ. ಪ್ರಸ್ತಾವನೆ ನೀಡಿದರು. ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಕರ್ಕೆರ ವಂದಿಸಿದರು. ಮೇಲ್ವಿಚಾರ ಪದ್ಮನಾಭ ಕಾರ್ಯಕ್ರಮ ನಿರ್ವಹಿಸಿದರು.
