ಬಂಟ್ವಾಳ; ಕೇರಳ ರಾಜ್ಯದ ತಳಂಬರದಲ್ಲಿ ಸಿಪಿಎಂ ಪಕ್ಷದ ವತಿಯಿಂದ ಇತ್ತೀಚೆಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಂದರ್ಭ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಶಿಲುಬೆಗೇರಿಸುವ ಸ್ತಬ್ದ ಚಿತ್ರ ಅಳವಡಿಸಿಕೊಂಡಿರುವ ಗುರು ನಿಂದನಾ ಕ್ರಮ ಹಾಗೂ ತಲಚೇರಿಯಲ್ಲಿ ಗುರುಗಳ ಪ್ರತಿಮೆ ಧ್ವಂಸ ಗೊಳಿಸಿರುವ ಅಮಾನವೀಯ ಪ್ರಕರಣ ಅತ್ಯಂತ ಹೇಯ ಮತ್ತು ವಿಕೃತಮನಸ್ಸಿನ ವಕೃತಮನಸ್ಸಿನ ರಾಜಕಾರಣದ ದ್ಯೋತಕ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲಿ ಶುಕ್ರವಾರ ಬೆಳಿಗ್ಗೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವತೆಯ ಸಾಕಾರಮೂರ್ತಿಯಾಗಿರುವ ನಾರಾಯಣ ಗುರುಗಳನ್ನು ಅವಮಾನಿಸುವ ಷಡ್ಯಂತ್ರದ ಹುಚ್ಚು ಮನಸ್ಸುಗಳ ಈ ವಿಚ್ಛಿದ್ರಶಕ್ತಿಗಳ ವಿರುದ್ದ ಕೇರಳ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಮತ್ತು ರಾಜಕಾರಣ ಈ ಎರಡೂ ಪರಸ್ಪರ ವಿರುದ್ದ ಪದಗಳು ಎಂದು ಅವರು ನಾರಾಯಣ ಗುರುಗಳು ಶಾಂತಿ , ಅಹಿಂಸೆ, ಪ್ರೀತಿ, ಸಮಾನತೆ ಹಾಗೂ ತ್ಯಾಗದ ಸಂಕೇತವಾದರೆ, ರಾಜಕಾರಣ ಹಿಂಸೆ, ರಕ್ತಪಾತ, ಅಶಾಂತಿ, ದ್ವೇಷ, ಮತಾಂಧತೆ,ಧರ್ಮಾಂಧತೆ ಹಾಗೂ ಅಕ್ರಮಣಗಳ ಸಂಕೇತವಾಗಿದೆ ಎಂದರು. ನಾರಾಯಣ ಗುರುಗಳು ಯಾವುದೇ ಜಾತಿ,ಧರ್ಮ, ಭಾಷೆ, ಗಡಿ, ರಾಜ್ಯಕೆ ಸೀಮಿತವಾದುದಲ್ಲ, ಅವರ ಮಾನವೀಯ ವಿಚಾರಧಾರೆ , ಅವರು ವಿಶ್ವಮಾನವ ಪರಿಕಲ್ಪನೆಗೆ ನೀಡಿದ ಮಹತ್ವಪೂರ್ಣ ಕೊಡುಗೆಯಿಂದ ಜಗದ್ಗುರು ಸ್ಥಾನವನ್ನು ಅಲಂಕರಿಸಿದ್ದಾರೆ. ಇಂತಹ ಮಾನವತಾವಾದಿ, ಸುಧಾರಣಾವಾದಿ, ವೈಚಾರಿಕ ಚಿಂತನೆಯ ಶೋಷಿತರ ವಿಮೋಚನೆಗಾಗಿ ಹೋರಾಡಿದ ನಾರಾಯಣ ಗುರುಗಳನ್ನು ರಾಜಕೀಯ ವಸ್ತುವಾಗಿ ಬಳಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ , ಅವರ ವಿಚಾರಧಾರೆಗಳನ್ನು ಕೊಲ್ಲುವ ವ್ಯವಸ್ಥಿತ ರಾಜಕೀಯ ಷಡ್ಯಂತ್ರವನ್ನು ಬಯಲಿಗೆಳೆಯಲು ಕೇರಳ ಸರ್ಕಾರ ಮೀನ ಮೇಷ ಎಣಿಸಿದರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕಿನ ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರಾದ ರಾಘವ ಅಮೀಣ್, ಸಂಜೀವ ಪೂಜಾರಿ, ಗೋಪಾಲ ಪೂಜಾರಿ, ಶ್ರೀಧರ ಪೂಜಾರಿ, ನಾರಾಯಣ ಸಾಲಿಯಾನ್, ಮಾಧವ ಬಂಗೇರ, ಶಂಕರ್ ಕಾಯರ್ ಮಾರ್, ಈಶ್ವರ ಪೂಜಾರಿ, ಪ್ರಭಾಕರ ಮಧ್ವ ಮೊದಲಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *